ಮುಶ್ತಾಕ್ ಅಲಿ ಟ್ವೆಂಟಿ-20: ಗುಜರಾತ್‌ಗೆ ಜಯ

Update: 2018-01-13 18:46 GMT

  ರಾಜ್‌ಕೋಟ್, ಜ.13: ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಲೀಗ್‌ನ ಪಶ್ಚಿಮ ವಲಯ ಪಂದ್ಯದಲ್ಲಿ ಗುಜರಾತ್ ತಂಡ ಸೌರಾಷ್ಟ್ರ ತಂಡವನ್ನು 8 ವಿಕೆಟ್‌ಗಳಿಂದ ಸದೆ ಬಡಿದಿದೆ. ಶನಿವಾರ ಎಸ್‌ಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಸೌರಾಷ್ಟ್ರ ತಂಡ ಗುಜರಾತ್ ಬೌಲರ್ ಜೆ.ಕೆ. ಪಾರ್ಮರ್(4-17) ದಾಳಿಗೆ ಸಿಲುಕಿ ಕೇವಲ 133 ರನ್‌ಗೆ ಆಲೌಟಾಯಿತು. ಪಾರ್ಮರ್‌ಗೆ ಪಿಯೂಷ್ ಚಾವ್ಲಾ(2-24) ಹಾಗೂ ಈಶ್ವರ ಚೌಧರಿ(3-30), ನಾಯಕ ಅಕ್ಷರ್ ಪಟೇಲ್(1-20) ಹಾಗೂ ಕರಣ್ ಪಟೇಲ್(1-22) ಸಮರ್ಥ ಸಾಥ್ ನೀಡಿದರು. ಸೌರಾಷ್ಟ್ರ ಪರ ವಿಶ್ವರಾಜ್ ಸಿನ್ಹಾ(48,32 ಎಸೆತ, 3 ಬೌಂಡರಿ, 1 ಸಿಕ್ಸರ್) ಅಗ್ರ ಸ್ಕೋರರ್ ಎನಿಸಿಕೊಂಡರು. ಗೆಲ್ಲಲು 134 ರನ್ ಗುರಿ ಪಡೆದ ಗುಜರಾತ್ ಪರ ಆರಂಭಿಕ ಆಟಗಾರ ಪ್ರಿಯಾಂಕ್ ಪಾಂಚಾಲ್(76,54 ಎಸೆತ, 10 ಬೌಂಡರಿ,1 ಸಿಕ್ಸರ್) ಅರ್ಧಶತಕದ ಕೊಡುಗೆ ನೀಡಿದರು. ಬಿ.ಎಚ್. ಮೆರಾಯ್(ಅಜೇಯ 35) ಹಾಗೂ ಚಿರಾಗ್ ಗಾಂಧಿ(ಅಜೇಯ 5) 18.1 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News