×
Ad

ಪಟಾಕಿ ಸಿಡಿದು 12 ವರ್ಷದ ಬಾಲಕ ಮೃತ್ಯು

Update: 2018-01-15 19:28 IST

ಬೆಂಗಳೂರು, ಜ.15: ಪಟಾಕಿ ಸ್ಫೋಟದಿಂದ 12 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬೆಂಗಳೂರಿನ ಹಲಸೂರಿನಲ್ಲಿ ನಡೆದಿದೆ.

ಹಲಸೂರಿನ ಕೇಂಬ್ರಿಜ್ ಲೇಔಟ್‌ನ ಲೂದರ್ ಚರ್ಚ್‌ನ ಆವರಣದಲ್ಲಿ ರವಿವಾರ ರಾತ್ರಿ ಈ ಘಟನೆ ನಡೆದಿದೆ. ಧನುಷ್(12) ಎಂಬ ಬಾಲಕ ಮೃತಪಟ್ಟಿದ್ದಾನೆ.
ಪ್ರತಿ ಹೊಸ ವರ್ಷದ 2ನೆ ರವಿವಾರ ಚರ್ಚ್ ಮುಂದೆ ಪಟಾಕಿ ಹೊಡೆಯುವುದು ಸಂಪ್ರದಾಯ. ರವಿವಾರ ಸಂಜೆ ಏಳು ಗಂಟೆ ನಂತರ ಪಟಾಕಿ ಸಿಡಿಸುವ ಸಂಭ್ರಮ ಆರಂಭವಾಗಿತ್ತು.

ಈ ವೇಳೆ ಅಲ್ಲಿಗೆ ಧನುಷ್ ತನ್ನ ಪೋಷಕರೊಂದಿಗೆ ಹೋಗಿ ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದ ಎಂದು ತಿಳಿದು ಬಂದಿದೆ. ರಾತ್ರಿ 9 ಗಂಟೆ ಸುಮಾರಿಗೆ ರಾಕೆಟ್‌ಗಳನ್ನು ಒಮ್ಮೆಲೆ ಸಿಡಿಸಲಾಯಿತು. ಈ ವೇಳೆ ಒಂದು ರಾಕೆಟ್ ಧನುಷ್ ತಲೆಯ ಮೇಲೆ ಬಿದ್ದು ಸ್ಫೋಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News