ಹನಿ ಟ್ರ್ಯಾಪ್ ದಂಧೆ: ಐವರ ಬಂಧನ

Update: 2018-01-18 15:40 GMT

ಬೆಂಗಳೂರು, ಜ. 18: ವೇಶ್ಯಾವಾಟಿಕೆಗೆ ಶ್ರೀಮಂತ ವ್ಯಕ್ತಿಗಳನ್ನು ಮನೆಗೆ ಕರೆಸಿ, ಬೆದರಿಸಿ ಹಲ್ಲೆ ಮಾಡಿ ಸುಲಿಗೆ ಮಾಡುತ್ತಿದ್ದ ಹನಿ ಟ್ರ್ಯಾಪ್ ದಂಧೆಯಲ್ಲಿ ತೊಡಗಿದ್ದ ಐದು ಜನರನ್ನು ಪೋಲಿಸರು ಬಂಧಿಸಿದ್ದಾರೆ.

ಹೆಗಡೆ ನಗರದ ಶಾಯಿನ್(40), ನೂರಿ ಅಲಿಯಾಸ್ ಶಮಾ(35), ಸಲ್ಮಾನ್ ಪರ್ವೀನ್(27), ಕೆ.ಜಿ. ಹಳ್ಳಿಯ ಸಜ್ಜಿದ್ ಶೇಖ್(38) ಹಾಗೂ ಶಬ್ಬೀರ್ ಶರೀಫ್(30) ಬಂಧಿತ ಆರೋಪಿಗಳು. ಬಂಧಿತರಿಂದ 5 ಸಾವಿರ ರೂ. ನಗದು, 5 ಮೊಬೈಲ್, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಶಿವಾಜಿನಗರದ ಸಲೀಂ ಹಾಗೂ ಮೆಂಟಲ್ ಆಸೀಫ್ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಗಿರಾಕಿಗಳು ಬಂದ ನಂತರ ಅವರಿಗೆ ಯುವತಿಯೊಬ್ಬಳನ್ನು ತೋರಿಸಿ ರೂಮ್ ಒಂದಕ್ಕೆ ಕಳುಹಿಸುತ್ತಿದ್ದು, 10 ನಿಮಿಷದೊಳಗೆ ಅವರುಗಳು ಬಟ್ಟೆಬಿಚ್ಚಿ ನಗ್ನರಾಗುತ್ತಿದ್ದಂತೆ, ಏಕಾಏಕಿ ರೂಮಿಗೆ ನುಗ್ಗಿ ನಗ್ನವಾಗಿದ್ದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದರು. ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇವೆ ಎಂದು ಬೆದರಿಸಿ, ಹಲ್ಲೆ ನಡೆಸಿ ಲಕ್ಷಾಂತರ ರೂ.ಸುಲಿಗೆ ಮಾಡುತ್ತಿದ್ದರು ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News