×
Ad

104 ವರ್ಷದ ವೃದ್ಧನಿಗೆ ಯಶಸ್ವಿ ‘ರೊಂಡಿ ಶಸ್ತ್ರಚಿಕಿತ್ಸೆ’

Update: 2018-01-19 18:54 IST

ಬೆಂಗಳೂರು, ಜ. 19: ಶತಮಾನ ಕಳೆದ ವಯೋವೃದ್ಧನಿಗೆ ಇಲ್ಲಿನ ಬನಶಂಕರಿಯ ಸಾಗರ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ರೊಂಡಿ ಶಸ್ತ್ರಚಿಕಿತ್ಸೆಯನ್ನು ನಡೆಸುವಲ್ಲಿ ಯಶಸ್ವಿಯಾಗಿದೆ.

104 ವರ್ಷದ ವೃದ್ಧ ಕುರ್ಚಿಯಿಂದ ಮೇಲೆ ಏಳುವ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದ ಪರಿಣಾಮ ಅವರ ಬಲ ರೊಂಡಿಗೆ ಗಂಭೀರ ಗಾಯವಾಯಿತು. ರೋಗಿ ನೂರು ವರ್ಷ ಮೀರಿದ್ದರಿಂದ ಅವರಿಗೆ ನಡೆದಾಡಲು ಬಹಳ ಕಷ್ಟವಾಗಿತ್ತು. ಅವರ ಮಕ್ಕಳಾದ ಚಂದ್ರಶೇಖರ್ ಹಾಗೂ ನಾಗರಾಜ್ ಇಬ್ಬರೂ ವಿಜ್ಞಾನಿಗಳು.
ರೋಗಿಯನ್ನು ತಕ್ಷಣವೇ ಬನಶಂಕರಿಯ ಸಾಗರ್ ಆಸ್ಪತ್ರೆಗೆ ಸೇರಿಸಿದ್ದು, ರೋಗಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಮೂಳೆ ತಜ್ಞ ಡಾ.ಬಸವರಾಜ್ ಕ್ಯವತೇರ್, ರೋಗಿಗೆ ರೊಂಡಿಯಲ್ಲಿ ಮುರಿತ ಉಂಟಾಗಿದ್ದರಿಂದ ಅಪಾರ ನೋವಿದ್ದು ನಡೆಯಲು ಅಶಕ್ತರಾಗಿದ್ದರು ಎಂದು ತಿಳಿಸಿದ್ದಾರೆ.

ಅನಂತರ ರೋಗಿಗೆ ಅರವಳಿಕೆ ನೀಡಿ ಅವರು ಎಚ್ಚರಿಕೆಯಲ್ಲಿರುವಾಗಲೇ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಏಟಾದ ಭಾಗವನ್ನು ಸಿಮೆಂಟ್ ರಹಿತ ಮಾಡ್ಯುಲರ್ ಬೈಪೊಲಾರ್ ಪ್ರೊಸ್ಥೆಸಿಸ್ ಮೂಲಕ ಬದಲಾಯಿಸಲಾಯಿತು. ಅನಂತರ ಅವರನ್ನು ದಿನದ ಆರೈಕೆಗೆ ಐಸಿಯುಗೆ ವರ್ಗಾಯಿಸಲಾಯಿತು. ಶೀಘ್ರದಲ್ಲೆ ಗುಣಮುಖರಾಗಲಿದ್ದು, ಕೆಲ ವಾರಗಳಲ್ಲಿ ಯಾರ ಸಹಾಯವೂ ಇಲ್ಲದೆ ನಡೆಯಬಲ್ಲರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News