×
Ad

ಸಾಹಿತ್ಯ ವಲಯದಲ್ಲಿ ರಾಜಕೀಯ ಪಕ್ಷದ ಬಾಲ ಹಿಡಿಯುವ ಗುಂಪಿದೆ: ಗಿರಡ್ಡಿ ಗೋವಿಂದರಾಜು

Update: 2018-01-19 19:21 IST

ಧಾರವಾಡ, ಜ.19: ಸಾಹಿತ್ಯ ವಲಯದಲ್ಲಿ ರಾಜಕೀಯ ಪಕ್ಷವೊಂದರ ಬಾಲ ಹಿಡಿಯುವ ಗುಂಪು ಇದೆ. ಅವರು ಅಕಾಡೆಮಿ, ಪ್ರಾಧಿಕಾರಕ್ಕೆ ಅಧ್ಯಕ್ಷ, ಸದಸ್ಯರಾಗುವುದಕ್ಕಾಗಿ ರಾಜಕೀಯ ಭಾಷಣ ಮಾಡಲು ನಿಸ್ಸೀಮರಾಗಿರುತ್ತಾರೆ ಎಂದು ಹಿರಿಯ ವಿಮರ್ಶಕ ಗಿರಡ್ಡಿ ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.

ಧಾರವಾಡದಲ್ಲಿ ನಡೆಯುತ್ತಿರುವ 6ನೆ ಸಾಹಿತ್ಯ ಸಂಭ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ವಲಯದಲ್ಲಿ ರಾಜಕೀಯ ಪಕ್ಷವೊಂದರ ಬಾಲ ಹಿಡಿಯುವ ಗುಂಪು ಇದೆ. ಅವರು ಅಕಾಡೆಮಿ, ಪ್ರಾಧಿಕಾರಕ್ಕೆ ಅಧ್ಯಕ್ಷ, ಸದಸ್ಯರಾಗುವುದಕ್ಕಾಗಿ ರಾಜಕೀಯ ಭಾಷಣ ಮಾಡಲು ನಿಸ್ಸೀಮರಾಗಿರುತ್ತಾರೆ, ಅಂತಹವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬೇಸರಿಸಿದರು.

ನಮ್ಮ ನಡುವಿನ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಮೊದಲಿನಿಂದಲೂ ರಾಜಕೀಯ ಭಾಷಣ ಮಾಡುವವರಲ್ಲಿ ಅಗ್ರಗಣ್ಯರು. ಆದರೆ, ಕನ್ನಡ ಸಾಹಿತ್ಯ ಸಮ್ಮೇಳನವೊಂದರಲ್ಲಿ ರಾಜಕೀಯ ಭಾಷಣ ಮಾಡಬಾರದಾಗಿತ್ತು. ಸಮ್ಮೇಳನದಲ್ಲಿ ಮಾತನಾಡಲೇಬೇಕಾದ ಹಲವು ವಿಷಯಗಳಿದ್ದವು. ಅದ್ಯಾವುದನ್ನು ಲೆಕ್ಕಿಸದೆ ಚಂಪಾ ತಮ್ಮ ಇಡೀ ಭಾಷಣವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಅವರು ವಿಷಾದಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News