ಹಜ್‌ಯಾತ್ರೆ-2018 : ಲಾಟರಿ ಮೂಲಕ ಜ.20ರಂದು ಯಾತ್ರಿಗಳ ಆಯ್ಕೆ

Update: 2018-01-19 15:53 GMT

ಬೆಂಗಳೂರು, ಜ.19: ಪ್ರಸಕ್ತ ಸಾಲಿನಲ್ಲಿ ಪವಿತ್ರ ಹಜ್‌ಯಾತ್ರೆ ಕೈಗೊಳ್ಳಲಿರುವ ರಾಜ್ಯದ ಯಾತ್ರಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಜ.20ರಂದು ಸಂಜೆ 6 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

www.hajcommittee.com ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ವಿಧಾನಸೌಧದೊಳಗೆ ಪ್ರವೇಶಿಸಲು ಭದ್ರತಾ ತಪಾಸಣೆ ವೇಳೆ ರಾಜ್ಯ ಹಜ್ ಸಮಿತಿ ನೀಡಿರುವ ಪತ್ರ ಹಾಗೂ ಗುರುತಿನ ಚೀಟಿಯನ್ನು ಜತೆಯಲ್ಲಿ ತರಬೇಕು. ಯಾತ್ರೆಗೆ ಆಯ್ಕೆಯಾಗುವ ಯಾತ್ರಿಗಳ ವಿವರಗಳನ್ನು ಭಾರತೀಯ ಹಜ್ ಸಮಿತಿಯ ವೆಬ್‌ಸೈಟ್ ಹಾಗೂ ರಾಜ್ಯ ಹಜ್ ಸಮಿತಿಯ ವೆಬ್‌ಸೈಟ್ www.karhaj.in ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News