80ರ ವೃದ್ಧೆಯ ಅತ್ಯಾಚಾರ!

Update: 2018-01-21 03:59 GMT

ಪುಣೆ, ಜ.21: ಅಪರಿಚಿತ ವ್ಯಕ್ತಿಯೊಬ್ಬ, ಒಬ್ಬಂಟಿಯಾಗಿದ್ದ 80ರ ವೃದ್ಧೆಯನ್ನು ಅತ್ಯಾಚಾರಗೈದ ಘಟನೆ ಜಿಲ್ಲೆಯ ತಲ್ವಾಡೆ ಗ್ರಾಮದಲ್ಲಿ ನಡೆದಿದೆ.

ಜನವರಿ 12ರ ರಾತ್ರಿ ಈ ಘಟನೆ ನಡೆದಿದ್ದು, ವೃದ್ಧೆ ತನ್ನ ಮಗನಿಗೆ ಘಟನೆಯನ್ನು ವಿವರಿಸಿದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ದೆಹು ರಸ್ತೆ ಪೊಲೀಸರು ಹೇಳಿದ್ದಾರೆ. ಚಾಲಕನಾಗಿರುವ ಮಗ ಮನೆಯಿಂದ ಹೊರಗೆ ಹೋಗಿದ್ದಾಗ ಮನೆಯೊಳಗೆ ಪ್ರವೇಶಿಸಿದ ದುಷ್ಕರ್ಮಿ ಅತ್ಯಾಚಾರ ಎಸಗಿದ ಎಂದು ವೃದ್ಧೆ ದೂರಿನಲ್ಲಿವಿವರಿಸಿದ್ದಾರೆ.

"ಮಗ ವಾಪಸ್ಸಾದ ಬಳಿಕ ವೃದ್ಧೆ ತನ್ನ ಮಗನಿಗೆ ಘಟನೆಯನ್ನು ವಿವರಿಸಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ದೂರು ನೀಡಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.

ಭಾರತೀಯ ದಂಡಸಂಹಿತೆಯ ಸೆಕ್ಷನ್ 376ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News