ಪ್ಲೇಟ್ ಸೆಮಿಫೈನಲ್ಸ್ ಗೆ ಕೆನಡಾ, ಝಿಂಬಾಬ್ವೆ ಅರ್ಹತೆ

Update: 2018-01-22 18:30 GMT

ವೆಲ್ಲಿಂಗ್ಟನ್, ಜ.22: ಕೆನಡಾ ಹಾಗೂ ಝಿಂಬಾಬ್ವೆ ತಂಡಗಳು ಕ್ರಮವಾಗಿ ಪಪುವಾ ನ್ಯೂಗಿನಿ ಹಾಗೂ ನಮೀಬಿಯಾ ತಂಡವನ್ನು ಮಣಿಸುವ ಮೂಲಕ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನ ಪ್ಲೇಟ್ ಸೆಮಿಫೈನಲ್ಸ್‌ಗೆ ತೇರ್ಗಡೆಯಾಗಿವೆ. ಸೋಮವಾರ ನಡೆದ ಪಂದ್ಯದಲ್ಲಿ ಆಲ್‌ರೌಂಡರ್ ಆಕಾಶ್ ಗಿಲ್ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಕೆನಡಾದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಗಿಲ್ ಶತಕದ ಸಹಾಯದಿಂದ ಕೆನಡಾ ತಂಡ ನ್ಯೂಗಿನಿ ತಂಡವನ್ನು 80 ರನ್‌ಗಳಿಂದ ಮಣಿಸಿತು.

ಮತ್ತೊಂದು ಪಂದ್ಯದಲ್ಲಿ ಝಿಂಬಾಬ್ವೆ ತಂಡ ವೆಸ್ಲೇ ಮಾಡಿವೆರ್ ಆಲ್‌ರೌಂಡ್ ಆಟದ ನೆರವಿನಿಂದ(47 ರನ್, 11ಕ್ಕೆ 2) ನಮೀಬಿಯಾ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು.

ಗ್ರೂಪ್ ಹಂತದಲ್ಲಿ ಅಗ್ರ ಸ್ಥಾನ ಪಡೆಯುವ 2 ತಂಡಗಳು ಸೂಪರ್‌ಲೀಗ್‌ನಲ್ಲಿ ಸ್ಥಾನ ಪಡೆದಿದ್ದು, ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ಪಂದ್ಯಗಳು ನಾಳೆಯಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್ ಹೋರಾಡಲಿವೆ. ಗಿಲ್ 12ನೇ ಆವೃತ್ತಿಯ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ 13ನೇ ಆಟಗಾರ ಎನಿಸಿಕೊಂಡಿದ್ದಾರೆ. ಗಿಲ್ ಶತಕದ ನೆರವಿನಿಂದ ಕೆನಡಾ 8 ವಿಕೆಟ್‌ಗೆ 265 ರನ್ ಗಳಿಸಿತು. ವೇಗಿ ಫೈಸಲ್ ಜಮಖಂಡಿ ಹಾಗೂ ಎಡಗೈ ಸ್ಪಿನ್ನರ್ ಅರಾನ್ ದಾಳಿಗೆ ತತ್ತರಿಸಿದ ನ್ಯೂಗಿನಿ 44.3 ಓವರ್‌ಗಳಲ್ಲಿ 185 ರನ್‌ಗೆ ಆಲೌಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News