ಹಾಕಿಂಗ್ ಬದುಕಿರುವುದು ನಿಜವೇ?

Update: 2018-01-22 18:34 GMT

ಮಾನ್ಯರೇ,

ಪ್ರಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್‌ರ ಹೆಸರನ್ನು ವಿಜ್ಞಾನದ ಗಂಧ ಗಾಳಿ ಇಲ್ಲದವರೂ ಕೇಳಿರಲೇ ಬೇಕು. ಜಾಗತಿಕ ಮಾಧ್ಯಮಗಳು ಅವರಿಗೆ ಕೊಟ್ಟ ಪ್ರಚಾರ ಅಂಥದ್ದು. ಅದಕ್ಕೆ ಅವರು ಅರ್ಹರೂ ಆಗಿದ್ದರು. ಯೌವನದಲ್ಲೇ ಎಮಿಯೋಟ್ರೋಫಿಕ್ ಲ್ಯಾಟರಲ್ ಸ್ಕೆರ್ಲೋಸಿಸ್ ಎಂಬ ನರಸಂಬಂಧಿ ರೋಗಕ್ಕೆ ತುತ್ತಾದ ಹಾಕಿಂಗ್ ಕ್ರಮೇಣ ಶರೀರದ ಚಲನೆಗಳನ್ನೆಲ್ಲಾ ಕಳೆದುಕೊಂಡು, ಮೆದುಳಿನ ಆಲೋಚನೆಗಳನ್ನು ವಿಶಿಷ್ಟ ಉಪಕರಣಗಳ ಮೂಲಕ ಜಗಜ್ಜಾಹೀರು ಮಾಡುತ್ತಾ ಎಷ್ಟೋ ವೈಜ್ಞಾನಿಕ ಚಿಂತನೆಗಳನ್ನು ನೀಡುತ್ತಿದ್ದಾರೆಂದು ನಾವೆಲ್ಲ ನಂಬಿದ್ದೆವು.
ಆದರೆ ಇತ್ತೀಚೆಗೆ ಕೆಲ ವಿಜ್ಞಾನಿಗಳು ಹಾಕಿಂಗ್ ಎಂದೋ 1985ರಲ್ಲೇ ತೀರಿಹೋಗಿದ್ದಾರೆ, ಬಳಿಕ ನಕಲಿ ವ್ಯಕ್ತಿಯೊಬ್ಬನನ್ನು ಆ ಜಾಗದಲ್ಲಿ ಕೂರಿಸಿ, ವಂಚಿಸಲಾಗುತ್ತಿದೆ ಎಂದು ಕೂಗೆಬ್ಬಿಸಿದ್ದಾರೆ.

ಇದುವರೆಗಿನ ನಂಬಿಕೆ ಪ್ರಕಾರ ವೀಲ್‌ಚೇರ್‌ನಲ್ಲಿ ಕುಳಿತಿರುವ ಹಾಕಿಂಗ್ ವಾಯ್ಸಸಿಂಥನೈಜರ್ ಮೂಲಕ ಮಾತಾಡಬಲ್ಲವರಾಗಿದ್ದಾರೆ. ಬಲದವಡೆಯನ್ನು ಕದಲಿಸುತ್ತಾ ಎದುರಿಗೆ ಇರುವ ಅಡ್ವಾನ್ಸ್‌ಡ್ ಕಂಪ್ಯೂಟರ್‌ನಲ್ಲಿ ಪದಗಳನ್ನು ಸ್ಕಾನ್ ಮಾಡಿಕೊಂಡು, ಅವನ್ನು ನುಡಿದರೆ ಅವು ಶಬ್ದ ತರಂಗಗಳಾಗಿ ಬದಲಾಗಿ ಕೇಳಿಸುತ್ತದೆ. ಆದರೆ ದವಡೆ ಅಲುಗಿಸಿದರೆ ಮಾತುಗಳು ಬಾರವು. ಹಿಂದಿನಿಂದ ಯಾರೋ ರೋಬೋ ವಾಯ್ಸಾ ಕೇಳಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಕಿಂಗ್‌ರ ಕೃತಿ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಂ’ ಬಿಡುಗಡೆಗೆ 3 ವರ್ಷಗಳ ಮುನ್ನವೇ ಆತ ತೀರಿಕೊಂಡರೆಂದು ವದಂತಿಗಳಿವೆ.

ಕಳೆದ ಕೆಲವು ವರ್ಷಗಳಿಂದೀಚೆಗೆ ಹಾಕಿಂಗ್(ನಕಲಿ?) ಮನುಕುಲವನ್ನು ಜ್ಯೋತಿಷಿಗಳಂತೆ ಭಯ ಬೀಳಿಸುತ್ತಿದ್ದಾರೆ. ಜಗತ್ತು ಇನ್ನು 100 ವರ್ಷಗಳು ಮಾತ್ರವೇ ಇರುತ್ತದೆ, ಅನ್ಯ ಜೀವಿಗಳ ದಾಳಿ ಸಂಭವಿಸುತ್ತದೆ, ಗ್ಲೋಬಲ್ ವಾರ್ಮಿಂಗ್ ಅತಿಯಾಗುತ್ತಿದೆ, ಬೇರೆ ಗ್ರಹದಲ್ಲಿ ವಸತಿ ಏರ್ಪಡಿಸಿಕೊಳ್ಳಿ-ಎಂಬಂಥ ಮಾತುಗಳೇ ಬರುತ್ತಿವೆ.

ವಿಜ್ಞಾನವನ್ನು ಬದಿಗಿಟ್ಟು ಯೋಚಿಸಿದರೂ ಎಂತೆೆಂಥ ದೃಢಕಾಯ ವ್ಯಕ್ತಿಗಳೇ 60-65 ವರ್ಷಕ್ಕೇ ಸಾಯುವಾಗ ಹಾಕಿಂಗ್ ದೀರ್ಘಾಯುಷಿಯಾಗಿದ್ದಾರೆಂದು ಇಷ್ಟು ಕಾಲ ನಂಬಿದ್ದು ಶತಮಾನದ ಮೂರ್ಖತನವೇ? ಉತ್ತರಿಸುವವರಾರು?

Writer - -ಕಸ್ತೂರಿ, ತುಮಕೂರು

contributor

Editor - -ಕಸ್ತೂರಿ, ತುಮಕೂರು

contributor

Similar News