ವಿಶ್ವ ಆರ್ಥಿಕ ವೇದಿಕೆಯಿಂದ ಶಾರುಖ್ ಖಾನ್ ಗೆ ‘ಕ್ರಿಸ್ಟಲ್ ಅವಾರ್ಡ್’ ಪ್ರದಾನ

Update: 2018-01-23 06:44 GMT

ಹೊಸದಿಲ್ಲಿ, ಜ.23: ವಿಶ್ವ ಆರ್ಥಿಕ ವೇದಿಕೆಯ 48ನೆ ವಾರ್ಷಿಕ ಸಮ್ಮೇಳನದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ 24ನೆ ಕ್ರಿಸ್ಟಲ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಭಾರತದಲ್ಲಿ ಮಕ್ಕಳ ಮತ್ತು ಮಹಿಳೆಯರ ಹಕ್ಕುಗಳನ್ನು ಬೆಂಬಲಿಸಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಂದಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಾರುಖ್, “ನಾನು ನನ್ನ ಸಹೋದರಿ, ಪತ್ನಿ ಹಾಗು ನನ್ನ ಮಗಳಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ. ಈ ಗೌರವಕ್ಕಾಗಿ ನಾನು ಹೆಮ್ಮೆ ಪಡುತ್ತೇನೆ” ಎಂದರು. ಶಾರುಖ್ ಜೊತೆಗೆ ಇಂಗ್ಲಿಷ್ ಗಾಯಕ ಸರ್ ಎಲ್ಟೋನ್ ಜಾನ್ ಹಾಗು ಆಸ್ಟ್ರೇಲಿಯನ್ ನಟಿ ಕೇಟ್ ಬ್ಲಾಂಚೆಟ್ ಅವರಿಗೂ ಕ್ರಿಸ್ಟಲ್ ಅವಾರ್ಡ್ ಪ್ರದಾನ ಮಾಡಲಾಯಿತು.

ಮೀರ್ ಫೌಂಡೇಶನ್ ಎಂಬ ಎನ್ ಜಿಒ ಮೂಲಕ ಮಾಡಿದ ಸೇವೆಗಾಗಿ ಶಾರುಖ್ ಗೆ ಈ ಪ್ರಶಸ್ತಿ ಸಂದಿದೆ. ಆ್ಯಸಿಡ್ ದಾಳಿಯ ಸಂತ್ರಸ್ತೆಯರು ಹಾಗು ಬೆಂಕಿ ಅವಘಡಗಳಿಂದ ಸುಟ್ಟ ಗಾಯಕ್ಕೊಳಗಾದ ಮಹಿಳೆಯರಿಗೆ ಮೀರ್ ಫೌಂಡೇಶನ್ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇಷ್ಟೇ ಅಲ್ಲದೆ ವೃತ್ತಿಪರ ತರಬೇತಿ, ಕಾನೂನು ನೆರವು, ಪುನರ್ವಸತಿಯಂತಹ ಸೇವೆಗಳನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News