ಅಲಾಸ್ಕದಲ್ಲಿ ತೀವ್ರ ಭೂಕಂಪ: ಸುನಾಮಿ ಎಚ್ಚರಿಕೆ

Update: 2018-01-23 11:08 GMT

ಅಲಾಸ್ಕ, ಜ. 23: ಗಲ್ಫ್ ಆಫ್ ಅಲಾಸ್ಕದಲ್ಲಿ ಮಂಗಳವಾರ 8.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇಷ್ಟೊಂದು ತೀವ್ರತೆಯ ಭೂಕಂಪದಿಂದ ಸುನಾಮಿ ಉಂಟಾಗಬಹುದೆಂಬ ಭೀತಿಯ ಕಾರಣ ಅಧಿಕಾರಿಗಳು ಜನರಿಗೆ ಕರಾವಳಿ ತೀರದಿಂದ ದೂರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದ್ದಾರೆ.

ಅಲಾಸ್ಕದ ಆಗ್ನೇಯ ಚಿನಿಯಕ್ ಎಂಬಲ್ಲಿಂದ 256 ಕಿ.ಮೀ. ದೂರದಲ್ಲಿ ಗ್ರೀನ್ ವಿಚ್ ಸಮಯ 9:31ಕ್ಕೆ ಭೂಕಂಪ ಸಂಭವಿಸಿದ್ದು, ಅದರ ಆಳ 10 ಕಿ.ಮೀ. ಆಗಿತ್ತೆನ್ನಲಾಗಿದೆ. 

ಭೂಕಂಪ ಸಂಭವಿಸಿದ ಕೂಡಲೇ ಅಲಾಸ್ಕದ ಕೆಲ ಭಾಗಗಳು ಹಾಗೂ ಕೆನಡಾದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಯಿತಲ್ಲದೆ, ಅಮೆರಿಕಾದ ಪಶ್ಚಿಮ ಕರಾವಳಿ ಹಾಗೂ ಹವಾಯಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಸುನಾಮಿ ಸಂಭವಿಸುವ ಸಾಧ್ಯತೆಯಿದ್ದು, ಅದು ಸಂಭವಿಸಿದ್ದೇ ಆದಲ್ಲಿ ವಿನಾಶಕಾರಿಯಾಗಬಹುದು ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕಾ ಕೇಂದ್ರ ಹೇಳಿದೆ. ಜಪಾನ್ ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News