ಹಜ್ ಯಾತ್ರಾರ್ಥಿಗಳಿಗೆ ವಿಮಾನನಿಲ್ದಾಣ ತೆರಿಗೆ ವಿನಾಯಿತಿ: ಹಜ್ ಸಮಿತಿ ಪ್ರಸ್ತಾಪ

Update: 2018-01-23 13:07 GMT

ಹೊಸದಿಲ್ಲಿ, ಜ.23: ಹಜ್ ಸಬ್ಸಿಡಿ ರದ್ದುಗೊಂಡಿರುವ ಕಾರಣ ಹಜ್ ಯಾತ್ರಿಗಳಿಗೆ ವಿಮಾನನಿಲ್ದಾಣ ತೆರಿಗೆ ವಿಧಿಸಬಾರದು ಎಂದು ಭಾರತೀಯ ಹಜ್ ಸಮಿತಿ(ಎಚ್‌ಸಿಒಎಲ್) ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ.

ಹಜ್ ಸಬ್ಸಿಡಿ ರದ್ದುಗೊಂಡಿರುವ ಕಾರಣ ಯಾತ್ರಾರ್ಥಿಗಳು ಸುಮಾರು 10,000 ರೂ. ವಿಮಾನನಿಲ್ದಾಣ ತೆರಿಗೆ ಸೇರಿದಂತೆ ಸರಿಸುಮಾರು 25,000 ರೂ. ಪಾವತಿಸಬೇಕಾಗುತ್ತದೆ. ವಿಮಾನ ನಿಲ್ದಾಣ ತೆರಿಗೆಯನ್ನು ಕೇಂದ್ರ ಸರಕಾರ ಹಿಂಪಡೆದರೆ ಹಜ್ ಯಾತ್ರಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಎಚ್‌ಸಿಒಎಲ್ ಸದಸ್ಯ ಇಫ್ತಿಕಾರ್ ಜಾವೆದ್ ಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ.

ಭಾರತೀಯ ಮುಸ್ಲಿಮ್ ಯಾತ್ರಾರ್ಥಿಗಳಿಗೆ ಈ ಹಿಂದೆ ಹಜ್ ಸಬ್ಸಿಡಿ ನೀಡಲಾಗುತ್ತಿದ್ದು, ಇದರನ್ವಯ ವಿಮಾನ ಟಿಕೆಟ್ ದರದಲ್ಲಿ ರಿಯಾಯಿತಿ ದೊರಕುತ್ತಿತ್ತು. ಈ ವರ್ಷದಿಂದ ಹಜ್ ಸಬ್ಸಿಡಿಯನ್ನು ಸರಕಾರ ರದ್ದುಪಡಿಸಿದೆ.

   ಈ ಮಧ್ಯೆ ಸೋಮವಾರ ಉತ್ತರಪ್ರದೇಶ ಸರಕಾರ ‘ಖುರಾಹ್’ (ಲಾಟರಿ ಡ್ರಾ ಮಾಡುವ ಪ್ರಕ್ರಿಯೆ) ನಡೆಸಿದ್ದು, ಈ ಪ್ರಕ್ರಿಯೆಯ ಮೂಲಕ ಈ ವರ್ಷ ಪವಿತ್ರ ಮೆಕ್ಕಾಗೆ ತೆರಳುವ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯದಲ್ಲಿ ಒಟ್ಟು 42,892 ಅರ್ಜಿಗಳು ಬಂದಿದ್ದು, 29,851 ಅರ್ಜಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ 2,621 ಸೀಟುಗಳು 70 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಮೀಸಲಾಗಿದ್ದರೆ, 32 ಸೀಟುಗಳು ಪುರುಷರ ಸಹಾಯವಿಲ್ಲದೆ ತೆರಳುವ ಮಹಿಳೆಯರಿಗೆ ಮೀಸಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News