ಕಿವೀಸ್‌ಗೆ ಆಘಾತ ನೀಡಿದ ಅಫ್ಘಾನಿಸ್ತಾನ ಸೆಮಿ ಫೈನಲ್‌ಗೆ

Update: 2018-01-25 18:59 GMT

ಕ್ರೈಸ್ಟ್‌ಚರ್ಚ್, ಜ.25: ಆತಿಥೇಯ ನ್ಯೂಝಿಲೆಂಡ್‌ನ್ನು 202 ರನ್ ಗಳಿಂದ ಮಣಿಸಿ ಆಘಾತ ನೀಡಿರುವ ಅಫ್ಘಾನಿಸ್ತಾನ ತಂಡ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.

 ಗುರುವಾರ ಇಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಆರಂಭಿಕ ಆಟಗಾರರಾದ ರಹ್ಮಾನುಲ್ಲಾ ಗುರ್ಬಝ್(69,67 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ಇಬ್ರಾಹಿಂ ಝದ್ರಾನ್(68,98 ಎಸೆತ, 5 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್‌ಗೆ ಸೇರಿಸಿದ 117 ರನ್ ಜೊತೆಯಾಟ, ಅಝ್ಮತುಲ್ಲಾ ಉಮರ್‌ಝೈ (66,23 ಎಸೆತ, 3 ಬೌಂಡರಿ, 7 ಸಿಕ್ಸರ್)ಹಾಗೂ ಬಹೀರ್ ಶಾ(ಅಜೇಯ 67,72 ಎ, 4 ಬೌಂ.) ಅರ್ಧಶತಕ ಕೊಡುಗೆ ನೆರವಿನಿಂದ 6 ವಿಕೆಟ್‌ಗಳ ನಷ್ಟಕ್ಕೆ 309 ರನ್ ಗಳಿಸಿತು.

ಆಫ್-ಸ್ಪಿನ್ನರ್ ಮುಜೀಬ್ ಝದ್ರಾನ್(4-14) ಹಾಗೂ ಲೆಗ್ ಸ್ಪಿನ್ನರ್ ಖೈಸ್ ಅಹ್ಮದ್(4-33) ಅತ್ಯುತ್ತಮ ಬೌಲಿಂಗ್‌ಗೆ ತತ್ತರಿಸಿದ ನ್ಯೂಝಿಲೆಂಡ್ ಕೇವಲ 107 ರನ್‌ಗೆ ಆಲೌಟಾಯಿತು.

ಪಾಕ್ ತಂಡ ಈಗಾಗಲೇ ಸೆಮಿ ಫೈನಲ್‌ಗೆ ತಲುಪಿರುವ ಕಾರಣ ಏಷ್ಯಾದ ಮೂರು ತಂಡಗಳು ಅಂತಿಮ ನಾಲ್ಕರ ಘಟ್ಟ ತಲುಪುವ ಸಾಧ್ಯತೆಯಿದೆ. ಶುಕ್ರವಾರ ಕ್ವೀನ್ಸ್‌ಟೌನ್‌ನಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಏಷ್ಯಾದ ಎರಡು ತಂಡಗಳಾದ ಭಾರತ-ಬಾಂಗ್ಲಾದೇಶ ಸೆಣಸಾಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News