ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ರಘುರಾಮ್ ರಾಜನ್ ಹೇಳಿದ್ದೇನು?

Update: 2018-01-27 05:42 GMT

ದಾವೋಸ್, ಜ. 27: ನೋಟು ರದ್ದತಿ ಹಾಗೂ ಜಿಎಸ್‌ಟಿಯಿಂದಾಗಿ ಭಾರತದ ಆರ್ಥಿಕ ಪ್ರಗತಿ ಗಣನೀಯವಾಗಿ ಕುಂಠಿತವಾಗಿದ್ದರೂ, ಭವಿಷ್ಯದಲ್ಲಿ ಶೇಕಡ 8ರಷ್ಟು ಜಿಡಿಪಿ ಪ್ರಗತಿ ಸಾಧಿಸಲು ಅವಕಾಶವಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್‌ ರಾಜನ್ ಹೇಳಿದ್ದಾರೆ.

ದಾವೋಸ್‌ನಲ್ಲಿ ಎನ್‌ಡಿಟಿವಿ ನಿರೂಪಕ ಪ್ರಣಯ್ ರಾಯ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ಜಿಎಸ್‌ಟಿ ಧೀರ್ಘಾವಧಿಯಲ್ಲಿ ಉತ್ತಮ ಫಲಿತಾಂಶ ನೀಡಲಿದೆ. ಆದರೆ ಭಾರತ ಇನ್ನಷ್ಟು ಸಿದ್ಧತೆ ಮಾಡಿಕೊಂಡು ಇದನ್ನು ಅನುಷ್ಠಾನಗೊಳಿಸಬಹುದಿತ್ತು" ಎಂದು ಅಭಿಪ್ರಾಯಪಟ್ಟರು.

ಯುಪಿಎ ಹಾಗೂ ಎನ್‌ಡಿಎ ಸರ್ಕಾರದ ಅಧಿಕಾರ ಅವಧಿಯಲ್ಲಿ ಭಾರತದ ಆರ್ಥಿಕತೆ ವಿಸ್ತೃತಮಟ್ಟದಲ್ಲಿ ಸ್ಥಿರವಾಗಿದೆ. ಅಂತೆಯೇ ವಿತ್ತೀಯ ಕೊರತೆಯನ್ನು ನಿಯಂತ್ರಿಸುವಲ್ಲಿ ಹಾಗೂ ಹಣದುಬ್ಬರ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿರುವುದು ಭಾತದ ಸಾಧನೆ ಎಂದು ಬಣ್ಣಿಸಿದರು.

ಆದರೆ ಸೂಕ್ಷ್ಮಹಂತದಲ್ಲಿ ಅಧಿಕಾರಿಗಳ ಅನುಷ್ಠಾನದಲ್ಲಿನ ಲೋಪದಿಂದಾಗಿ ಇದರ ಪೂರ್ಣ ಪ್ರಯೋಜನ ಸಿಗುತ್ತಿಲ್ಲ. ಇದು ಸಾಧ್ಯವಾದಲ್ಲಿ ಉದ್ಯೋಗಾವ ಕಾಶ ದೊಡ್ಡಮಟ್ಟದಲ್ಲಿ ಸೃಷ್ಟಿಯಾಗಲಿದೆ ಎಂದು ಹೇಳಿದರು. ನಿರ್ಮಾಣ ಕ್ಷೇತ್ರ, ಮೂಲಸೌಕರ್ಯ ಹಾಗೂ ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತಂದಲ್ಲಿ ಭಾರತದ ಪ್ರಗತಿದರ ಕಾಪಾಡಿಕೊಳ್ಳಬಹುದು ಎಂದರು. ಹಲವು ಇತಿಮಿತಿಗಳ ಹೊರತಾಗಿಯೂ, ಆರ್ಥಿಕ ಹಿನ್ನಡೆಗೆ ಮುನ್ನ ಇದ್ದ ಶೇಕಡ 8ರ ಪ್ರಗತಿಯನ್ನು ಸಾಧಿಸಲು ಭಾರತಕ್ಕೆ ಅವಕಾಶವಿದೆ ಎಂದು ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News