ನಂ.1 ಸ್ಥಾನ ವಶಪಡಿಸಿಕೊಂಡ ವೋಝ್ನಿಯಾಕಿ

Update: 2018-01-29 19:18 GMT

ಪ್ಯಾರಿಸ್, ಜ.29: ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸಿಮೊನಾ ಹಾಲೆಪ್‌ರನ್ನು ಮೂರು ಸೆಟ್‌ಗಳಿಂದ ಮಣಿಸಿ ಮೊದಲ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದ ಡೆನ್ಮಾರ್ಕ್ ಆಟಗಾರ್ತಿ ಕರೊಲಿನಾ ವೋಝ್ನಿಯಾಕಿ ನಂ.1 ಸ್ಥಾನ ವಶಪಡಿಸಿಕೊಂಡಿದ್ದಾರೆ. ವೋಝ್ನಿಯಾಕಿ 2010ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿ ನಂ.1 ಸ್ಥಾನಕ್ಕೇರಿದ್ದರು. ಇದೇ ವೇಳೆ, ಹಾಲೆಪ್ ವಿಶ್ವದ ನಂ.2ನೇ ಸ್ಥಾನಕ್ಕೆ ಕುಸಿದಿದ್ದಾರೆ.

 ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಒಂದು ಸ್ಥಾನ ಭಡ್ತಿ ಪಡೆದು ಮೂರನೇ ಸ್ಥಾನ ಹಾಗೂ ಆ್ಯಂಜೆಲಿಕ್ ಕೆರ್ಬರ್ ಏಳು ಸ್ಥಾನ ಮೇಲಕ್ಕೇರಿ 9ನೇ ಸ್ಥಾನ ತಲುಪಿದ್ದಾರೆ. ಮೆಲ್ಬೋರ್ನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್ 37 ರಿಂದ 20ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಮಾರ್ಟೆನ್ಸ್ ಆಸ್ಟ್ರೇಲಿಯನ್ ಓಪನ್‌ನ ಅಂತಿಮ-4ರ ಸುತ್ತಿನಲ್ಲಿ ವೋಝ್ನಿಯಾಕಿಗೆ ಶರಣಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News