ತನ್ನನ್ನು ಗೃಹ ಬಂಧನದಲ್ಲಿರಿಸಿದ್ದು ಮೋದಿ ಸರಕಾರವಲ್ಲ, ಪಾಕಿಸ್ತಾನ: ಹಫೀಝ್ ಸಯೀದ್

Update: 2018-02-03 10:40 GMT

ಲಾಹೋರ್,ಫೆ.3: ತನ್ನನ್ನು ಗೃಹಬಂಧನದಲ್ಲಿರಿಸಿದ್ದು ಮೋದಿ ಸರಕಾರವಲ್ಲ, ಪಾಕಿಸ್ತಾನ ಸರಕಾರ ಎಂದು ಮುಂಬೈ ಭಯೋತ್ಪಾದನಾ ದಾಳಿಯ ಸೂತ್ರಧಾರ ಜಮಾಅತ್ತುದ್ದಾವ ನಾಯಕ ಹಫೀಝ್ ಸಯೀದ್ ಹೇಳಿದ್ದಾನೆ. ಕಾಶ್ಮೀರ ವಿಷಯವನ್ನೆತ್ತುವುದನ್ನು ತಡೆಯಲು ಪಾಕಿಸ್ತಾನ ಸರಕಾರ ತನ್ನನ್ನು ಹತ್ತು ತಿಂಗಳು ಗೃಹಬಂಧನದಲ್ಲಿಟ್ಟಿತ್ತೆಂದು ಸಯೀದ್ ಲಾಹೋರಿನ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಿದ್ದ ವೇಳೆ ಆರೋಪಿಸಿದ್ದಾನೆ.

 ಈ ಹಿಂದೆ, ಭಾರತ ಮತ್ತು ಅಮೆರಿಕದ ಒತ್ತಡಕ್ಕೆ ಮಣಿದು ಪಾಕಿಸ್ತಾನ ತನ್ನನ್ನು ಗೃಹಬಂಧನದಲ್ಲಿರಿಸಿತ್ತು ಎಂದು ಸಯೀದ್ ಹೇಳಿದ್ದುಆತನನ್ನು ಕಳೆದನವೆಂಬರ್ ಆರಕ್ಕೆ ಗೃಹಬಂಧನದಿಂದ ಬಿಡುಗಡೆಗೊಳಿಸಲಾಗಿದೆ.

ಕಾಶ್ಮೀರಿಗಳ ತ್ಯಾಗವನ್ನು ಯಾಕೆ ಇಸ್ಲಾಮಾಬಾದ್ ಕಡೆಗಣಿಸುತ್ತಿದೆ ಎಂದು ತನಗೆ ಮನವರಿಕೆಯಾಗಿಲ್ಲ.ಪ್ರಧಾನಿ ಶಾಹಿದ್‌ಅಬ್ಬಾಸಿ ಸಚಿವ ಸಂಪುಟದ ಇತರ ಸಚಿವರು ಸಭೆ ಸೇರಿ ಕಾಶ್ಮೀರಕ್ಕೆತಮ್ಮ ಬೆಂಬಲವನ್ನು ಘೋಷಿಸಬೇಕೆಂದು ಸಯೀದ್ ಆಗ್ರಹಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News