×
Ad

ಬೆಂಗಳೂರು: ಆ್ಯಕ್ಸಿಸ್ ಬ್ಯಾಂಕ್‌ ಎಟಿಎಂಗೆ ಕಲ್ಲು

Update: 2018-02-05 20:59 IST

ಬೆಂಗಳೂರು, ಫೆ.5: ಆ್ಯಕ್ಸಿಸ್ ಬ್ಯಾಂಕ್‌ನ ಎಟಿಎಂಗೆ ಕಲ್ಲು ತೂರಿ ಕೆಲ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ರವಿವಾರ ರಾತ್ರಿ ಆವಲಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ.

ಸೋಮವಾರ ಬೆಳಗ್ಗೆ ಗ್ರಾಹಕರೊಬ್ಬರು ಎಟಿಎಂ ಕೇಂದ್ರದೊಳಗೆ ಹೋದಾಗ ಕೆಲ ಭಾಗ ಜಖಂಗೊಂಡಿರುವುದನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ತಲಘಟ್ಟಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯಾವುದೇ ರೀತಿಯಲ್ಲೂ ಯಂತ್ರ ಲೋಪಗೊಂಡಿಲ್ಲ. ಕೆಲ ಕಿಡಿಗೇಡಿಗಳು ಕಲ್ಲಿನಿಂದ ಇದನ್ನು ಒಡೆದಿದ್ದಾರೆ. ಹಣವೂ ಕೂಡ ಕಳವಾಗಿಲ್ಲ ಎಂದು ತಿಳಿಸಿದ್ದಾರೆ. ಈ ಎಟಿಎಂ ಕೇಂದ್ರಕ್ಕೆ ಕಾವಲುಗಾರ ಇರಲಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News