ಬೆಂಗಳೂರು: ಎರಡು ಕಡೆ ಮನೆಗಳ್ಳತನ

Update: 2018-02-05 15:37 GMT

ಬೆಂಗಳೂರು, ಫೆ.5: ನಗರದಲ್ಲಿ ಎರಡು ಕಡೆ ಮನೆಕಳ್ಳತನ ನಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.

ಕೊಡಿಗೆಹಳ್ಳಿ: ಮನೆಯೊಂದರ ಕಿಟಕಿಯ ಗ್ರಿಲ್ ಮುರಿದು ಒಳ ನುಸುಳಿದ ದುಷ್ಕರ್ಮಿಗಳು ಚಿನ್ನಾಭರಣಗಳು, ವಿದೇಶಿ ಹಣ, ಕೈ ಗಡಿಯಾರವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.

ಶಂಕರನಗರದ 13ನೆ ಕ್ರಾಸ್ ನಿವಾಸಿ ಡಾ.ಶಶಿ ಎಂಬುವರ ಕುಟುಂಬ ಫೆ.3ರಂದು ಹೊರಗೆ ತೆರಳಿದ್ದಾಗ ದುಷ್ಕರ್ಮಿಗಳು ಇವರ ಮನೆಯ ಅಡುಗೆ ಮನೆಯ ಕಿಟಕಿ ಗ್ರಿಲ್ ಮುರಿದು ಒಳನುಗ್ಗಿದ್ದಾರೆ. ರವಿವಾರ ಕುಟುಂಬ ವಾಪಸ್ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.ಈ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕೆ.ಆರ್.ಪುರಂ: ಹಾಡಹಗಲೇ ಮನೆಯೊಂದರ ಬೀಗ ಹೊಡೆದು ಒಳನುಗ್ಗಿದ ದುಷ್ಕರ್ಮಿಗಳು ಬೀರುವನ್ನು ಮುರಿದು 200ಗ್ರಾಂ ಆಭರಣ ಹಾಗೂ 20 ಸಾವಿರ ಹಣವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ. ದೇವಸಂದ್ರ ಮುಖ್ಯರಸ್ತೆಯ ನಾಯಕನಗರ ನಿವಾಸಿ ಬಾಬು ಎಂಬುವರು ಬೆಳಗ್ಗೆ 4 ಗಂಟೆಗೆ ಕಾರ್ಯನಿಮಿತ್ತ ಹೊರಗೆ ಹೋಗಿದ್ದರು. ಈ ವೇಳೆ ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News