ಮಾಜಿ ಪ್ರಧಾನಿ ದೇವೇಗೌಡ-ಮಾಜಿ ಸಂಸದ ಎಚ್.ಜಿ.ರಾಮುಲು ಸಮಾಲೋಚನೆ
ಬೆಂಗಳೂರು, ಫೆ. 5: ಹೈದ್ರಾಬಾದ್ ಕರ್ನಾಟಕದ ಮುತ್ಸದಿ ಮಾಜಿ ಸಂಸದ ಎಚ್.ಜಿ. ರಾಮುಲು ಅವರ ಬೆಂಗಳೂರಿನ ನಿವಾಸಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭೇಟಿ ನೀಡಿ ಹೈ-ಕ ಭಾಗದ ರಾಜಕೀಯ ದೃವೀಕರಣದ ಕುರಿತು ಸೋಮವಾರ ಸಮಾಲೋಚನೆ ನಡೆಸಿದರು.
ಕಳೆದ ನಾಲ್ಕೈದು ದಶಕಗಳ ಕಾಂಗ್ರೆಸ್ ನಂಟಿಗೆ ವಿದಾಯ ಹೇಳಿರುವ ಎಚ್.ಆರ್. ಶ್ರೀನಾಥ ಇತ್ತೀಚಿಗೆ ಶಾಸಕ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಸೇರ್ಪಡೆ ಖಚಿತವಾಗುತ್ತಿದ್ದಂತೆ ಜೊತೆಗೆ ಹೈಕಮಾಂಡ್ ನಿಷ್ಠಾವಂತ ಬೆಂಬಲಿಗರ ಬೇಡಿಕೆಗಳಿಗೆ ಸ್ಪಂದಿಸದಿದ್ದರಿಂದ ಶ್ರೀನಾಥ್ ಹಾಗೂ ಅವರ ಬೆಂಬಲಿಗರು ರಾಜೀನಾಮೆಯನ್ನು ಸಲ್ಲಿಸಿದ್ದು, ಜೆಡಿಎಸ್ ಸೇರ್ಪಡೆ ಕುರಿತು ಈ ಸಂದರ್ಭದಲ್ಲಿ ಚರ್ಚೆ ನಡೆದಿದೆ ಎನ್ನಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಗಂಗಾವತಿಯಲ್ಲಿ ಜೆಡಿಎಸ್ ಸಮಾವೇಶ ನಡೆಸುವುದರ ಮೂಲಕ ಎಚ್.ಜಿ. ರಾಮುಲು, ಎಚ್.ಆರ್ ಶ್ರೀನಾಥ ಹಾಗೂ ಅವರ ಅಪಾರ ಬೆಂಬಲಿಗರು ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮಧುಬಂಗಾರಪ್ಪ, ಮಾಜಿ ಎಂ.ಎಲ್.ಸಿ ಎಚ್.ಆರ್. ಶ್ರೀನಾಥ, ಮಾಜಿ ಸಚಿವ ಎಚ್.ವಿಶ್ವನಾಥ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ, ಶಾಸಕ ಜೆಟಿ ದೇವೇಗೌಡ, ಮಾಜಿ ಎಂಎಲ್‌ಸಿ ಸಂಗಟಿ ಕರಿಯಣ್ಣ, ಕೊಪ್ಪಳ ಜೆಡಿಎಸ್ ಜಿಲ್ಲಾಧ್ಯಕ್ಷ ಪ್ರದೀಪಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸಯ್ಯದ್, ಬಿ.ಎಂ. ಪಾರೂಕ್‌ಸಾಬ್, ಕೊಪ್ಪಳ ನಗರಾ ಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನ್ಯಾಯಾವಾದಿ ಆಸಿಫ್ ಅಲಿ, ಪಾಡಗುತ್ತಿ ಅಕ್ತರ್ ಸೇರಿದಂತೆ ಇನ್ನಿತರರು ಇದ್ದರು.