ಥೈವಾನ್‌ನಲ್ಲಿ ಪ್ರಬಲ ಭೂಕಂಪ

Update: 2018-02-07 17:42 GMT

ಹುವಾಲೀನ್ (ತೈವಾನ್), ಫೆ. 7: ತೈವಾನ್‌ನ ಪ್ರಸಿದ್ಧ ಪ್ರವಾಸಿ ನಗರ ಹುವಾಲೀನ್‌ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ.

ಸುಮಾರು 85 ಮಂದಿ ನಾಪತ್ತೆಯಾಗಿದ್ದು, ಕುಸಿದ ಕಟ್ಟಡಗಳ ಅಡಿಯಲ್ಲಿ ಅವರಿಗಾಗಿ ಬುಧವಾರ ಶೋಧ ಕಾರ್ಯಾಚರಣೆ ನಡೆದಿದೆ.

ರಿಕ್ಟರ್ ಮಾಪಕದಲ್ಲಿ 6.4ರಷ್ಟಿದ್ದ ಭೂಕಂಪ ಕರಾವಳಿ ನಗರದ ಸಮೀಪ ಮಂಗಳವಾರ ಮಧ್ಯರಾತ್ರಿಗೆ ಕೊಂಚ ಮುನ್ನ ಸಂಭವಿಸಿತು. ಈ ಪ್ರಾಕೃತಿಕ ವಿಕೋಪದಲ್ಲಿ 243 ಮಂದಿ ಗಾಯಗೊಂಡಿದ್ದಾರೆ.

ನಾಪತ್ತೆಯಾದವರ ಪೈಕಿ ಹೆಚ್ಚಿನವರು ಕಟ್ಟಡಗಳ ಒಳಗೆ ಸಿಕ್ಕಿಹಾಕಿಕೊಂಡಿರಬೇಕೆಂದು ಭಾವಿಸಲಾಗಿದೆ. ಕೆಲವು ಕಟ್ಟಡಗಳು ಅಪಾಯಕಾರಿ ರೀತಿಯಲ್ಲಿ ಹೊಯ್ದಿಡುತ್ತಿವೆ.

ಇನ್ನೆರಡು ವಾರಗಳಲ್ಲಿ ರಿಕ್ಟರ್ ಮಾಪಕದಲ್ಲಿ 5ರ ತೀವ್ರತೆಯ ಪಶ್ಚಾತ್ ಕಂಪನವೊಂದು ದ್ವೀಪ ರಾಷ್ಟ್ರದಲ್ಲಿ ಸಂಭವಿಸುವ ಸಾಧ್ಯತೆಯಿದೆ ಎಂದು ಸರಕಾರ ತಿಳಿಸಿದೆ.

ನಗರದ ಸುಮಾರು 40,000 ಮನೆಗಳಿಗೆ ನೀರಿನ ಪೂರೈಕೆ ನಿಂತು ಹೋಗಿದೆ ಹಾಗೂ ಸುಮಾರು 1,900 ಮನೆಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News