×
Ad

ಮರಳು ಆಮದು ನೆಪದಲ್ಲಿ ಜನರ ಮರುಳು: ಜಗದೀಶ್ ಶೆಟ್ಟರ್

Update: 2018-02-07 18:52 IST

ಬೆಂಗಳೂರು, ಫೆ. 7: ಮಲೇಷಿಯಾದಿಂದ ಮರಳು ಆಮದು ನೆಪದಲ್ಲಿ ಜನರನ್ನು ‘ಮರುಳು’ ಮಾಡಲು ಸರಕಾರ ಯತ್ನ ನಡೆಸಿದ್ದು, ಮರಳು ಆಮದಿನಲ್ಲಿ ಅವ್ಯವಹಾರ ನಡೆದಿದೆ. ಚುನಾವಣಾ ಸಮೀಪಿಸುತ್ತಿರುವುದರಿಂದ ಸರಕಾರ ಹೆಚ್ಚಿನ ಪ್ರಮಾಣದ ಕಮಿಷನ್ ಪಡೆಯುತ್ತಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ದೂರಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಮರಳು ಟೆಂಡರ್‌ಗೆ ಸಂಬಂಧಿಸಿದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಸದಸ್ಯ ಪಿ.ರಾಜೀವ್ ಕೇಳಿದ ಪ್ರಶ್ನೆ ತಡೆ ಹಿಡಿಯಲಾಗಿದ್ದು, ಶುಕ್ರವಾರ ಉತ್ತರ ನೀಡಲಾಗುವುದು ಎಂದು ಸ್ಪೀಕರ್ ಕೋಳಿವಾಡ ಪ್ರಕಟಿಸಿದರು.

ಇದರಿಂದ ಕೆರಳಿದ ಶೆಟ್ಟರ್, ಮರಳು ಆಮದು ಟೆಂಡರ್‌ನಲ್ಲಿ ಅವ್ಯವಹಾರ ನಡೆಸಿದೆ. ಹೀಗಾಗಿ ಸರಕಾರ ಉತ್ತರ ನೀಡಲು ಹಿಂದೇಟು ಹಾಕುತ್ತಿದೆ. ಶೇ.30ರಷ್ಟು ಕಮಿಷನ್ ಸರಕಾರ ಇದು ಎಂಬುದು ಜಗಜ್ಜಾಹೀರಾಗಿದೆ. ಈ ಸರಕಾರ ಎಲ್ಲ ದಂಧೆ ಮಾಡುತ್ತಿದೆ ಎಂದು ಟೀಕಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೃಹತ್ ಕೈಗಾರಿಕಾ ಸಚಿವ ದೇಶಪಾಂಡೆ, ರಾಜ್ಯ ಸರಕಾರದ ವಿರುದ್ಧ ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಯಾವುದೇ ಪ್ರಶ್ನೆ ಕೇಳಿದರೂ ಉತ್ತರ ನೀಡಲು ಸರಕಾರ ಸಿದ್ಧವಿದೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಎಲ್ಲವನ್ನೂ ಪ್ರಸ್ತಾಪಿಸಲಿ. ಅದು ಬಿಟ್ಟು ಆರೋಪ ಮಾಡುವುದು ಶೋಭೆಯಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News