ಷೇರು ಮಾರುಕಟ್ಟೆ ಮಹಾಕುಸಿತ: ಟ್ರಂಪ್ ಹೇಳಿದ್ದೇನು?

Update: 2018-02-08 04:15 GMT

ವಾಷಿಂಗ್ಟನ್, ಫೆ. 8: ಷೇರು ಮಾರುಕಟ್ಟೆಯಲ್ಲಿ ಮಹಾಕುಸಿತದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಮಾತನಾಡಿದ್ದು, ಆರ್ಥಿಕತೆಯ ಬಗ್ಗೆ ಒಳ್ಳೆಯ ಸುದ್ದಿ ಕೇಳಿದ ಜನ ಹುಚ್ಚೆದ್ದು ಷೇರುಗಳನ್ನು ಮಾರಾಟ ಮಾಡುತ್ತಿರುವುದು ಕುಸಿತಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಿದ್ದಾರೆ.

ಹಿಂದೆಲ್ಲ ಒಳ್ಳೆಯ ಸುದ್ದಿ ಕೇಳಿದ ತಕ್ಷಣ ಷೇರು ಮಾರುಕಟ್ಟೆ ಗಗನಮುಖಿಯಾಗುತ್ತಿತ್ತು. "ಆದರೆ ಇಂದು ಒಳ್ಳೆಯ ಸುದ್ದಿ ವರದಿಯಾದಾಗ ಷೇರು ಮಾರುಕಟ್ಟೆ ಪಾತಾಳಕ್ಕೆ ಕುಸಿದಿದೆ" ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ವೇತನ ಹೆಚ್ಚಳ ಮತ್ತು ಹಣದುಬ್ಬರ ಹೆಚ್ಚಳದ ನಿರೀಕ್ಷೆಯಿಂದ ಮಂಗಳವಾರ ಬಿರುಸಿನ ಮಾರಾಟ ನಡೆದಿದೆ ಮತ್ತು ವಾಲ್‌ಸ್ಟ್ರೀಟ್ ಮಾರುಕಟ್ಟೆ ಭಾಗಶಃ ಪುನಶ್ಚೇತನಗೊಂಡಿದ್ದು, ಹಣದುಬ್ಬರ ಹೆಚ್ಚಳದಿಂದ ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಇದೆ. ಇದು ಹಲವು ವರ್ಷಗಳಿಂದ ಅಗ್ಗದ ಬಡ್ಡಿದರದಲ್ಲಿ ಸಾಲ ಪಡೆಯುತ್ತಿದ್ದ ಕಾರ್ಪೊರೇಟ್ ಕಂಪನಿಗಳಿಗೆ ತಡೆಯಾಗಲಿದೆ ಎಂದು ವಿಶ್ಲೇಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News