ಶಾದಿಭಾಗ್ಯ ಯೋಜನೆಯಡಿ 66 ಸಾವಿರ ಫಲಾನುಭವಿಗಳಿಗೆ ಹಣ: ತನ್ವೀರ್ ಸೇಠ್

Update: 2018-02-09 14:51 GMT

ಬೆಂಗಳೂರು, ಫೆ.9: ಕಳೆದ ಮೂರು ವರ್ಷಗಳಲ್ಲಿ ಶಾದಿಭಾಗ್ಯ ಯೋಜನೆಯಡಿಯಲ್ಲಿ 78725 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಈಗಾಗಲೇ 66 ಸಾವಿರ ಫಲಾನುಭವಿಗಳಿಗೆ ಹಣ ನೀಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಮಾನೆ ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಕುಟುಂಬದ ಹೆಣ್ಣು ಮಕ್ಕಳಿಗೆ, ವಿಚ್ಛೇದಿತ ಮಹಿಳೆ ಮತ್ತು ವಿಧವೆಯರಿಗೆ ಮದುವೆ ನಿಮಿತ್ತ ವಿವಾಹದ ಖರ್ಚು ಮತ್ತು ವೆಚ್ಚಗಳ ಸಾಮಗ್ರಿಗಳಿಗಾಗಿ ಶಾದಿ ಭಾಗ್ಯ ಯೋಜನೆಯಡಿಯಲ್ಲಿ 50 ಸಾವಿರ ರೂ.ಹಣವನ್ನು ನೀಡಲಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಸಿದ 66 ಸಾವಿರ ಫಲಾನುಭವಿಗಳಿಗೆ ಹಣ ನೀಡಲಾಗಿದೆ ಎಂದು ಹೇಳಿದರು.

2016-17ನೆ ಸಾಲಿನಲ್ಲಿ ಶಾದಿ ಭಾಗ್ಯ ಯೋಜನೆಗೆ 10013.50 ಲಕ್ಷ ರೂ.ಮೀಸಲಿರಿಸಿ, ವೆಚ್ಚ ಮಾಡಲಾಗಿದ್ದು, 20027 ಫಲಾನುಭವಿಗಳು ಇದರ ಪ್ರಯೋಜನ ಪಡೆದಿರುತ್ತಾರೆ ಎಂದು ಹೇಳಿದರು.

ಶಾದಿಭಾಗ್ಯ ಯೋಜನೆಯಡಿ ಬಿಡುಗಡೆಯಾದ ಅನುದಾನ
2013-14-2092(ಫಲಾನುಭವಿಗಳು)-1046.00(ಬಿಡುಗಡೆಯ ಅನುದಾನ)
2014-15-6966(ಫಲಾನುಭವಿಗಳು)-3483.00(ಬಿಡುಗಡೆಯ ಅನುದಾನ)
2015-16-5072(ಫಲಾನುಭವಿಗಳು)-2536.00(ಬಿಡುಗಡೆಯ ಅನುದಾನ)
 2016-17-20027(ಫಲಾನುಭವಿಗಳು)-10013.50(ಬಿಡುಗಡೆಯ ಅನುದಾನ)
2017-18-31853(ಫಲಾನುಭವಿಗಳು)-15926.50(ಬಿಡುಗಡೆಯ ಅನುದಾನ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News