ಖಾಜಾ ಬಂದಾನವಾಜ್, ಮಂಜುನಾಥೇಶ್ವರ ವಿಶ್ವ ವಿದ್ಯಾಲಯ ವಿಧೇಯಕಗಳ ಮಂಡನೆ
Update: 2018-02-09 20:25 IST
ಬೆಂಗಳೂರು, ಫೆ. 9: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಹಾಗೂ ಕಲಬುರ್ಗಿಯಲ್ಲಿ ಪ್ರತ್ಯೇಕವಾಗಿ ಎರಡು ಖಾಸಗಿ ವಿಶ್ವ ವಿದ್ಯಾಲಯ ಸ್ಥಾಪಿಸಲು ಅವಕಾಶ ಕಲ್ಪಿಸುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವ ವಿದ್ಯಾಲಯ ವಿಧೇಯಕ ಮತ್ತು ಖಾಜಾ ಬಂದಾನವಾಜ್ ವಿಶ್ವ ವಿದ್ಯಾಲಯ ವಿಧೇಯಕವನ್ನು ಮಂಡಿಸಲಾಯಿತು.
ಶುಕ್ರವಾರ ವಿಧಾನಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪರವಾಗಿ ಕೃಷಿ ಸಚಿವ ಕೃಷ್ಣಬೈರೇಗೌಡ ಎರಡು ವಿಧೇಯಕಗಳನ್ನು ಮಂಡನೆ ಮಾಡಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶೈಕ್ಷಣಿಕ ಸೊಸೈಟಿ ಮತ್ತು ಖಾಜಾ ಬಂದಾನವಾಜ್ ಶಿಕ್ಷಣ ಸಂಘವು ರಾಜ್ಯದಲ್ಲಿ ಪ್ರತ್ಯೇಕವಾಗಿ ಎರಡು ಖಾಸಗಿ ವಿಶ್ವ ವಿದ್ಯಾಲಯ ಸ್ಥಾಪಿಸಲು ಮುಂದೆ ಬಂದಿವೆ. ಹೀಗಾಗಿ ಅದಕ್ಕೆ ಅವಕಾಶ ಕಲ್ಪಿಸಲು ವಿಧೇಯಕದ ಮೂಲಕ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಉಲ್ಲೇಖ ಮಾಡಲಾಗಿದೆ.