ಮರಗಳ ಸಂರಕ್ಷಣೆ ವಿಧೇಯಕ ಮಂಡನೆ: ಅನುಮತಿ ಪಡೆದು ಕೆಲ ಮರ ಕಡಿಯಲು ಅವಕಾಶ

Update: 2018-02-09 15:06 GMT

ಬೆಂಗಳೂರು, ಫೆ. 9: ರೈತರು ತಮ್ಮ ಭೂಮಿಯಲ್ಲಿ ಬೆಳೆಯುವ ಕೆಲ ಮರಗಳನ್ನು ಅನುಮತಿ ಪಡೆದು ಕಡಿಯುವುದಕ್ಕೆ ವಿನಾಯಿತಿ ನೀಡಲು ಅವಕಾಶ ಕಲ್ಪಿಸುವ ಕರ್ನಾಟಕ ಮರಗಳ ಸಂರಕ್ಷಣೆ (ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಶುಕ್ರವಾರ ವಿಧಾನಸಭೆಯಲ್ಲಿ ಶಾಸಕ ರಚನೆ ಕಲಾಪದಲ್ಲಿ ಅರಣ್ಯ ಸಚಿವ ರಮಾನಾಥ ರೈ ಅವರ ಪರವಾಗಿ ಕೃಷಿ ಸಚಿವ ಕೃಷ್ಣ ಬೈರೇಗೌಡ ವಿಧೇಯಕವನ್ನು ಮಂಡಿಸಿದರು.

ತೆಂಗು, ಈರಿತ್ರಿನ, ನೀಲಗಿರಿ, ಗ್ಲೈರೆಸಿಡಿಯಾ, ಹೊಪಿಯಾ ವೈಟಿನಾ, ಪ್ರಾಸಿಪಿಸ್, ರಬ್ಬರ್, ಸೆಸ್ಬನಿಯ, ಸಿಲ್ವರ್ ಓಕ್, ಅಡಿಕೆ, ಕಾಫಿ, ಸೀಬೆ, ಹೆಬ್ಬೇವು, ನಿಂಬೆ, ಐಲೆತಸ್ ಎಕ್ಸೆಲ್ಸಾ, ಮಾವು, ಸಪೋಟ, ಬರ್ಮಾ ಬಿದಿರು, ಹಳದಿ ಬಿದಿರು, ಅಕೇಷಿಯಾ ಮ್ಯಾಂಜಿಯಮ್, ಗೋಡಂಬಿ ಕಡಿಯುವುದಕ್ಕೆ ಈ ಕಾನೂನು ಅನ್ವಯವಾಗುವುದಿಲ್ಲ ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News