×
Ad

ಫೆ.11 ರಿಂದ ಈಶ್ವರೀಯ ವಿವಿಯ 82ನೆ ವಾರ್ಷಿಕೋತ್ಸವ

Update: 2018-02-09 21:08 IST

ಬೆಂಗಳೂರು, ಫೆ. 9: ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದ 82 ನೆ ವಾರ್ಷಿಕೋತ್ಸವ ಹಾಗೂ ಆಧ್ಯಾತ್ಮಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಫೆ.11 ಮತ್ತು 12 ರಂದು ನಗರದ ಕೆಂಪೇಗೌಡ ಮೈದಾನ ಹಾಗೂ ಬಿಬಿಎಂಪಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾನಿಲಯದ ಸಂಚಾಲಕಿ ಬಿ.ಕೆ.ಸುಮಾ, ಮೌಲ್ಯಾಧಾರಿತ ಜೀವನದ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಅನೇಕ ಸಮ್ಮೇಳನ, ವಿವಿಧ ಗೋಷ್ಠಿಗಳನ್ನು, ಕಾರ್ಯಾಗಾರಗಳನ್ನು ಈ ಎರಡು ದಿನಗಳಲ್ಲಿ ಏರ್ಪಡಿಸಲಾಗಿದೆ. 1108 ವೃತ್ತಿಪರ 2216 ದೀಪಗಳನ್ನಿಡುವ ಮೂಲಕ ದೇಶದ ಅತಿದೊಡ್ಡ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆಂದು ಹೇಳಿದರು.

ಕಾರ್ಯಕ್ರಮವನ್ನು ಶಾಸಕ ಅಶ್ವಥ್‌ನಾರಾಯಣ ಉದ್ಘಾಟಿಸಲಿದ್ದು, ವಿವಿ ಪುರಂನ ಸಂಚಾಲಕ ರಾಜಯೋಗಿನಿ, ಸಚಿವ ಎಂ.ಕೃಷ್ಣಪ್ಪ, ಮೇಯರ್ ಸಂಪತ್‌ರಾಜ್ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು. ಫೆ.12 ರಂದು ಬಿಬಿಎಂಪಿ ಪದವಿಪೂರ್ವ ಕಾಲೇಜು ಬಳಿ 18 ಅಡಿ ಎತ್ತರದ ಒಂದು ಲಕ್ಷಕ್ಕೂ ಹೆಚ್ಚು ಬಲ್ಪ್‌ಗಳನ್ನು ಬಳಸಿ ತಯಾರಿಸಿರುವ ಬೃಹತ್ ಶಿವಲಿಂಗವನ್ನು ಪ್ರದರ್ಶನ ಮಾಡಲಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News