ಅಮ್ಮಚ್ಚಿಯ ನೆನಪಿನಲ್ಲಿ ರಾಜ್ ಶೆಟ್ಟಿ

Update: 2018-02-09 18:54 GMT

ತನ್ನ ಚೊಚ್ಚಲ ಚಿತ್ರ ‘ಒಂದು ಮೊಟ್ಟೆಯ ಕಥೆ’ಯ ಮೂಲಕ ಪ್ರೇಕ್ಷಕರ ಮನಗೆದ್ದಿರುವ ರಾಜ್ ಬಿ.ಶೆಟ್ಟಿಗೆ ಈಗ ಸ್ಯಾಂಡಲ್‌ವುಡ್‌ನಲ್ಲಿ ಎಲ್ಲಿಲ್ಲದ ಬೇಡಿಕೆ. ಮೊದಲ ಚಿತ್ರದಲ್ಲೇ ನಿರ್ದೇಶಕನಾಗಿ ನಟನಾಗಿ ಮಿಂಚಿರುವ ರಾಜ್ ಶೆಟ್ಟಿಗೆ ಕನ್ನಡದ ಹಲವಾರು ಪ್ರತಿಷ್ಠಿತ ಬ್ಯಾನರ್‌ಗಳಿಂದ ಆಹ್ವಾನಗಳು ಬರತೊಡಗಿವೆ.

ಈ ಮಧ್ಯೆ ರಾಜ್‌ಶೆಟ್ಟಿ ಸದ್ದಿಲ್ಲದೆಯೇ ತನ್ನ ಎರಡನೆ ಚಿತ್ರದ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ‘ಅಮ್ಮಚ್ಚಿ ಎಂಬ ನೆನಪು’ ಎಂದು ಹೆಸರಿಡಲಾದ ಈ ಚಿತ್ರವನ್ನು ರಾಜ್‌ಶೆಟ್ಟಿ ನಿರ್ದೇಶಿಸಿಲ್ಲ ವಾದರೂ, ಅದರಲ್ಲಿ ನಾಯಕನಾಗಿ ನಟಿಸಿದ್ದಾರೆ. ‘ಅಕ್ಕು’, ‘ಅನಭಿಜ್ಞ ಶಾಕುಂತಲ’, ‘ಗಾಂಧಿ ಬಂದ’ ಅಂತಹ ಮನೋಜ್ಞ ನಾಟಕಗಳ ನಿರ್ದೇಶಕಿ, ನಟಿ ಚಂಪಾ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಂದಹಾಗೆ ‘ಅಮ್ಮಚ್ಚಿ ಎಂಬ ನೆನಪು’ ಮಹಿಳಾ ಪ್ರಧಾನ ಕಥೆಯನ್ನು ಹೊಂದಿದೆಯೆಂಬ ಮಾತುಗಳೂ ಕೇಳಿಬರುತ್ತಿವೆ.

70ರ ದಶಕದ ಹಿನ್ನೆಲೆಯಲ್ಲಿ ನಡೆಯುವ ಕಥಾವಸ್ತುವನ್ನು ಒಳ ಗೊಂಡ ಈ ಚಿತ್ರದಲ್ಲಿ ರಾಜ್‌ಶೆಟ್ಟಿ, ಓರ್ವ ಸಂಪ್ರದಾಯಸ್ಥ ಬ್ರಾಹ್ಮಣ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ವರ್ಷ ‘ಒಂದು ಮೊಟ್ಟೆಯ ಕತೆ’ಯ ಮೂಲಕ ಪ್ರೇಕ್ಷಕರ ಮನಸೂರೆಗೊಂಡ ರಾಜ್ ಶೆಟ್ಟಿ, ಈ ವರ್ಷ ‘ಅಮ್ಮಚ್ಚಿ ಎಂಬ ನೆನಪು’ ಚಿತ್ರದಲ್ಲಿ ಯಾವ ಮೋಡಿ ಮಾಡಲಿದ್ದಾರೆಂಬ ಕುತೂಹಲ ಕನ್ನಡಚಿತ್ರ ಪ್ರೇಮಿಗಳನ್ನು ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News