ಅಬುಧಾಬಿಯ ಪ್ರಪ್ರಥಮ ಹಿಂದೂ ದೇವಾಲಯಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ

Update: 2018-02-11 13:04 GMT

ದುಬೈ, ಫೆ.11: ಅಬುಧಾಬಿಯ ಪ್ರಪ್ರಥಮ ಹಿಂದೂ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರು. 

ಅಬುಧಾಬಿಯ ಒಪೆರಾ ಹೌಸ್ ನಲ್ಲಿ ವಿಡಿಯೋ ಕಾನ್ಫರನ್ಸ್ ಮೂಲಕ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿಸಿರುವುದಾಗಿ ಪ್ರಕಟಿಸಿದ ಮೋದಿ ಅವರು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದರು.

ಬೃಹತ್ ದೇವಾಲಯ ನಿರ್ಮಾಣಕ್ಕೆ ಅವಕಾಶ ನೀಡಿದ ಅಬುಧಾಬಿಯ ರಾಜಕುಮಾರ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ರಿಗೆ ಭಾರತದ 125 ಕೋಟಿ ಜನರ ಪರವಾಗಿ ಇದೇ ಸಂದರ್ಭ ಮೋದಿ ಕೃತಜ್ಞತೆ ಸಲ್ಲಿಸಿದರು.

“ವಾಸ್ತುಶಿಲ್ಪ ಮತ್ತು ವೈಭವದ ಕಾರಣಕ್ಕೆ ಮಾತ್ರ ಈ ದೇವಾಲಯ ಅದ್ಭುತವೆನಿಸಲಾರದು. ಈ ದೇವಾಲಯವು ಇಡೀ ವಿಶ್ವಕ್ಕೆ ‘ವಸುಧೈವ ಕುಟುಂಬಕಂ’ ಎನ್ನುವ ಸಂದೇಶವನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ಅರಬ್ ರಾಷ್ಟ್ರಗಳು ಮತ್ತು ಭಾರತದ ಸಂಬಂಧ ತುಂಬಾ ಹಳೆಯದು. ಸಂಬಂಧ ಕೇವಲ ಆಡಳಿತಕಷ್ಟೇ ಸೀಮಿತವಾಗಿಲ್ಲ. ಸಹಕಾರಕ್ಕೆ ಸಂಬಂಧಿಸಿದ್ದು. ಭಾರತದಲ್ಲಿ ವ್ಯಾಪಾರ ವಹಿವಾಟು ಸುಲಭವಾಗಿದೆ. ನಾವು ಜನಪ್ರಿಯ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ. ಉಪಯುಕ್ತ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ.  ಕಡಿಮೆ ಅವಧಿಯಲ್ಲಿ ಜಿಎಸ್ ಟಿ ಸಮಸ್ಯೆ ಬಗೆಹರಿಸಿದ್ದೇವೆ. ಭಾರತ ಈಗ ಬದಲಾವಣೆಯ ಹಾದಿಯಲ್ಲಿದೆ” ಎಂದು ಪ್ರಧಾನಿ ಹೇಳಿದರು.

55 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ಈ ದೇವಾಲಯ ನಿರ್ಮಾಣವಾಗಲಿದೆ. 2020ರ ವೇಳೆಗೆ ಈ ದೇವಾಲಯ ನಿರ್ಮಾಣ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. 

ಈ ದೇವಾಲಯವನ್ನು 55,000 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುವುದು. ದೇವಾಲಯದ ಕೆತ್ತನೆಯನ್ನು ಭಾರತೀಯ ಶಿಲ್ಪಿಗಳೇ ಮಾಡಲಿದ್ದು ನಂತರ ಯುಎಇಯಲ್ಲಿ ಅವುಗಳನ್ನು ಜೋಡಿಸಲಾಗುವುದು. 2020ರಲ್ಲಿ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣವಾಗಲಿದ್ದು ಎಲ್ಲಾ ಧರ್ಮೀಯರೂ ಈ ದೇವಾಲಯವನ್ನು ಪ್ರವೇಶಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News