ಒಮನ್: ಎಸ್.ಕೆ.ಎಂ.ಡಬ್ಲ್ಯು.ಎ.ಯಿಂದ ಸೀರತುನ್ನಬಿ ಕಾರ್ಯಕ್ರಮ

Update: 2018-02-13 05:42 GMT

ಒಮನ್, ಫೆ.13: ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್(ಎಸ್.ಕೆ.ಎಂ.ಡಬ್ಲ್ಯು.ಎ.) ಒಮನ್ ಇದರ ವತಿಯಿಂದ 2017-2018ರ ಸೀರತುನ್ನಬಿ (ಸ.) ಕಾರ್ಯಕ್ರಮವು ಮಸ್ಕತ್ ನ ಕೋರಲ್ ಸೆಲೆಬ್ರೇಶನ್ ಹಾಲ್, ಅಲ್ ವಾದಿ ಟವರ್ಸ್ ವಾದಿ ಕಬೀರ್'ನಲ್ಲಿ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮಕ್ಸೂದ್ ಶೇಖ್ ಚಂದಾವರ, "ತಪ್ಪುಗಳು ತನ್ನವರಿಂದಾದರೂ ಎಳ್ಳಷ್ಟೂ ಅನ್ಯಾಯಕ್ಕೆ ಸಹಕರಿಸದೆ ನ್ಯಾಯದ ಪರವಾಗಿ ನಿಂತ ಪ್ರವಾದಿ ಮುಹಮ್ಮದ್(ಸ.) ಅವರ ಜೀವಿತಾವಧಿಯಲ್ಲಿನ ಪ್ರತಿಯೊಂದು ಆಗುಹೋಗುಗಳು ನಮಗೆ ಪ್ರೇರಣೆಯಾಗಿದ್ದು, ಅವರ ದಾರಿಯಲ್ಲಿ ಸಾಗಬೇಕಾಗಿರುವುದು ನಮ್ಮ ನಮ್ಮೆಲ್ಲರ ಕರ್ತವ್ಯ" ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ನಿಹಾರ್ ಅಹ್ಮದ್ ಎರ್ಮಾಲ್ ಮನ್ಸೂರ್ ಮಾತನಾಡಿ, ಎಸ್.ಕೆ.ಎಂ.ಡಬ್ಲ್ಯು.ಎ. ಪ್ರತೀ ವರ್ಷವು ನಡೆಸಿಕೊಂಡು ಬರುತ್ತಿರುವ ಸೀರತುನ್ನಬಿ ಕಾರ್ಯಕ್ರಮ ಹೆಸರಿಗಷ್ಟೇ ಸೀಮಿತವಾಗದೆ ಇಲ್ಲಿ ಸಿಕ್ಕಿರುವ ಸೀರತ್ ಉಪದೇಶ ಮತ್ತು ಉದ್ದೇಶವನ್ನು  ಮೈಗೂಡಿಸಿಕೊಳ್ಳಬೇಕೆಂದು ವಿನಂತಿಸಿದರು.

ವೇದಿಕೆಯಲ್ಲಿ ಸರ್ಫರಾಝ್ ಹುಬ್ಬಳ್ಳಿ, ಇಂಡಿಯನ್ ಪ್ರವಾಸಿ ಫೋರಂ ಅಧ್ಯಕ್ಷ ಮುಹಮ್ಮದ್ ಅನ್ವರ್ ಮೂಡುಬಿದಿರೆ, ಡಿ.ಕೆ.ಎಸ್.ಸಿ. ಅಧ್ಯಕ್ಷ ಮೋನಬ್ಬ ಅಬ್ದುಲ್ ರಹ್ಮಾನ್, ಸೋಶಿಯಲ್ ಫೋರಂ ಅಧ್ಯಕ್ಷ ಅಬ್ದುಲ್ ಹಮೀದ್ ಪಾಣೆಮಂಗಳೂರು ಉಪಸ್ಥಿತರಿದ್ದರು.

ಸಂಸ್ಥೆಯ ಸಲಹೆಗಾರ ಶಾಹೇಬ್ಝಾದ ಮಹಮೂದ್ ದುಆ ನೆರವೇರಿಸಿದರು.

ಮಕ್ಕಳಿಗಾಗಿ ಕಿರಾಅತ್, ನಅತ್, ಭಾಷಣ, ಆಟೋಟ ಸ್ಪರ್ಧೆಗಳ ಜೊತೆಗೆ ಪೋಷಕರಿಗೆ ಕಿರಾಅತ್, ನಅತ್ ಹಾಗೂ ಕ್ವಿಝ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಸ್ಥೆಯ ಸಂಕ್ಷಿಪ್ತ ಕಾರ್ಯ ರೂಪುರೇಷೆಯನ್ನು ಸಯ್ಯದ್ ಮೊಹಿದಿನ್ ಸಾಹೇಬ್ ಸಾಸ್ಥಾನ್ ವಿವರಿಸಿದರು. ಎ.ಕೆ.ಮೊಹಿಯುದ್ದೀನ್ ಮಂಗಳೂರು ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ನೂರ್ ಪಡುಬಿದ್ರೆ ಮತ್ತು ತಂಡ ಮಕ್ಕಳ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಪ್ರಧಾನ ಕಾರ್ಯದರ್ಶಿ ಸಮೀರ್ ಅಹ್ಮದ್ ಉಡುಪಿ ಬಹುಮಾನಗಳನ್ನು ವಿತರಿಸಿದರು. ನಿಯಾಝ್ ಅಹ್ಮದ್ ಮಂಗಳೂರು ಸ್ವಾಗತಿಸಿದರು. ಅನ್ಸಾರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಕಿರಾಅತ್ ಪಠಿಸಿದ ಶಾಕಿರ್ ಅಹ್ಮದ್ ಮಂಗಳೂರು ವಂದಿಸಿದರು.

ವರದಿ: ಅಬ್ದುಲ್ ಮುಬಾರಕ್ ಕಾರಜೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News