×
Ad

ಬಿಎಸ್ಪಿ ಜೊತೆಗೂಡಿ 20 ಸ್ಥಾನ ಗೆಲ್ಲುವ ಭರವಸೆ: ಕುಮಾರಸ್ವಾಮಿ

Update: 2018-02-13 20:55 IST

ಬೆಂಗಳೂರು.ಫೆ.13: ಬಿಎಸ್‌ಪಿ ಎಷ್ಟು ಕ್ಷೇತ್ರಗಳಲ್ಲಿ ಗೆದ್ದಿದೆ ಎಂಬುದಕ್ಕಿಂತ ಎಷ್ಟು ಮತಗಳ ಅಂತರದಲ್ಲಿ ಸೋತಿದ್ದಾರೆ ಎಂಬುವುದು ಮುಖ್ಯ. ಬಿಎಸ್‌ಪಿ ಜತೆಗೂಡಿ 20 ಸ್ಥಾನ ಗೆಲ್ಲುವಂತೆ ರಣತಂತ್ರ ರೂಪಿಸುತ್ತೇವೆ ಎಂದು ಜೆಡಿಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್ಪಿ-ಜೆಡಿಎಸ್ ಮೈತ್ರಿ ರಾಷ್ಟ್ರ ರಾಜಕಾರಣದ ಬೆಳವಣಿಗೆಗೆ ನಾಂದಿ ಹಾಡುತ್ತದೆ. ಜೆಡಿಎಸ್, ಬಿಎಸ್‌ಪಿ ಜತೆಗೂಡಿ ಬಿಎಸ್‌ಪಿ ಪಕ್ಷದ 20 ಸೀಟು ಗೆಲ್ಲುವಂತೆ ರಣತಂತ್ರ ರೂಪಿಸುತ್ತೇವೆ ಎಂದರು.

ಪ್ರಾದೇಶಿಕ ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದರೆ ಜನರ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ. ಕಾವೇರಿ, ಮಹಾದಾಯಿ ವಿವಾದ ಎಲ್ಲವೂ ಇತ್ಯರ್ಥ ಆಗುತ್ತದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇವೆ. ರಾಷ್ಟ್ರೀಯ ಪಕ್ಷಗಳು ಕೇವಲ ಸಾಲ ಮನ್ನಾದ ಘೋಷಣೆ ಮಾಡಿವೆ, ಸಾಲ ಮನ್ನಾ ಮಾಡುವುದಿಲ್ಲ. ಪಂಜಾಬ್, ಉತ್ತರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಎಲ್ಲೆಡೆ ರೈತರ ಸಾಲ ಮನ್ನಾ ಘೋಷಣೆ ಆಗಿದೆ ಅಷ್ಟೆ. ಆದರೆ, ಇನ್ನೂ ಹಣ ನೀಡಿಲ್ಲ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News