ಮಲ್ಯ ನೆಮ್ಮದಿಗೆ ಭಂಗ ಇಲ್ಲ!

Update: 2018-02-14 04:10 GMT

ಲಂಡನ್, ಫೆ.14: ಮದ್ಯ ದೊರೆ ವಿಜಯ್ ಮಲ್ಯ ಅವರ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಸಿಂಗಾಪುರದ ಬಿಓಸಿ ಏವಿಯೇಷನ್ ವಿರುದ್ಧ 90 ದಶಲಕ್ಷ ಡಾಲರ್ ಮೌಲ್ಯದ ಪ್ರಕರಣದಲ್ಲಿ ಹಿನ್ನಡೆಯಾಗಿದ್ದರೂ, ಮಲ್ಯರ ವಿಲಾಸಿ ಜೀವನಕ್ಕೇನೂ ಇದರಿಂದ ಪೆಟ್ಟು ಬಿದ್ದಿಲ್ಲ. ಲಂಡನ್ ಹೈಕೋರ್ಟ್ ಮಲ್ಯ ಅವರ ಜೀವನ ಭತ್ತೆಯನ್ನು ಮಾಸಿಕ 4.5 ಲಕ್ಷ ರೂಪಾಯಿಯಿಂದ 16 ಲಕ್ಷ ರೂಪಾಯಿಗೆ ಹೆಚ್ಚಿಸಲು ಆದೇಶ ನೀಡಿದೆ.

ವಿಜಯ್ ಮಲ್ಯ ಅವರ ಜಾಗತಿಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ ಭತ್ತೆಯನ್ನು ಹೆಚ್ಚಿಸಲು ಕೋರ್ಟ್ ಸೂಚಿಸಿದೆ. ಇದರಿಂದಾಗಿ ಮಲ್ಯರ ವಾರದ ಭತ್ತೆ, ಬ್ರಿಟನ್‌ನಲ್ಲಿ ಶಿಕ್ಷಣ ಮುಗಿಸಿದವರು ಪಡೆಯುವ ವಾರ್ಷಿಕ ಆದಾಯಕ್ಕೆ ಸಮವಾದಂತಾಗಿದೆ. "ಅವರು ವಿಲಾಸಿ ಜೀವನ ನಡೆಸಿದವರು. ನ್ಯಾಯಾಲಯ ದಿಢೀರನೇ ಅವರಿಗೆ ವಾರಕ್ಕೆ ಕೇವಲ 200 ಪೌಂಡ್ (17 ಸಾವಿರ ರೂಪಾಯಿ)ನಲ್ಲಿ ಜೀವನ ನಡೆಸಲು ಸೂಚಿಸಿತ್ತು. ಇದರ ಹೆಚ್ಚಳಕ್ಕೆ ಮಲ್ಯ ಮನವಿ ಮಾಡಿದ್ದರು" ಎಂದು ಝೈವಲ್ಲಾ ಆ್ಯಂಡ್ ಕಂಪೆನಿಯ ಪಾಲುದಾರ ಸರೋಶ್ ಝೈವಲ್ಲಾ ಹೇಳಿದ್ದಾರೆ. ಇದರ ಜತೆಗೆ ಕಾನೂನು ವೆಚ್ಚಕ್ಕೆ ಅವರು ಅರ್ಹರಾಗಿದ್ದಾರೆ. ನ್ಯಾಯಾಧೀಶರು ಅವರ ಜೀವನಶೈಲಿಯನ್ನು ಪರಿಗಣಿಸಿ ಈ ಆದೇಶ ನೀಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಮಲ್ಯ ಇದೀಗ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳನ್ನು ಮರಳಿಸುವಂತೆ ಮನವಿ ಮಾಡಿದ್ದಾರೆ. ಬೆಂಗಳೂರಿನ ಸಾಲ ವಸೂಲಾತಿ ನ್ಯಾಯ ಮಂಡಳಿ (ಡಿಆರ್‌ಟಿ) ನೀಡಿದ ತೀರ್ಪನ್ನು ದಾಖಲಿಸಿಕೊಳ್ಳುವಂತೆ ಕೇಳಿದ್ದಾರೆ. ಇದರ ವಿಚಾರಣೆ ಏಪ್ರಿಲ್ 16 ಮತ್ತು 17ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News