ಅಜ್ಮಾನ್‌ನಲ್ಲಿ 14ನೇ ವರ್ಷದ 'ಬಿಸಿಎಫ್ ಬ್ಯಾರೀಸ್ ಸ್ಪೋರ್ಟ್ಸ್ ಫೆಸ್ಟಿವಲ್-2018'

Update: 2018-02-14 10:41 GMT

ಅಜ್ಮಾನ್, ಫೆ.14: ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್) ವತಿಯಿಂದ 14ನೇ ವರ್ಷದ ಬ್ಯಾರೀಸ್ ಸ್ಪೋರ್ಟ್ಸ್-2018 ಇತ್ತೀಚೆಗೆ ಇಲ್ಲಿನ ತುಂಬೆ ಕ್ರೀಡಾಂಗಣದಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ತುಂಬೆ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಿಸಿಎಫ್ ಅಧ್ಯಕ್ಷ ಬಿ.ಕೆ.ಯೂಸುಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮೊಯ್ದಿನ್ ವುಡ್ ವರ್ಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ತುಂಬೆ ಅಶ್ರಫ್, ಕೆನರಾಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಬಿ.ಎಂ.ನಝೀರ್ ಅತಿಥಿಗಳಾಗಿದ್ದರು.

ಬಿಸಿಎಫ್ ಉಪಾಧ್ಯಕ್ಷರಾದ ಎಂ.ಇ.ಮೂಳೂರು, ಅಬ್ದುಲ್ಲತೀಫ್ ಮುಲ್ಕಿ ಹಾಗೂ ಅಮೀರುದ್ದೀನ್ ಎಸ್.ಐ.,ಸ್ಕೈ ಲೈನ್ ಬಿಲ್ಡರ್ಸ್‌ನ ಎಂ.ಡಿ. ಹಬೀಬ್ ರಹ್ಮಾನ್, ನ್ಯೂ ಮಾರ್ಕ್ ಟೀಮ್‌ನ ನೋವೆಲ್ ಅಲ್ಮೇಡಾ, ಬಿಸಿಎಫ್ ಸಲಹೆಗಾರರಾದ ಹಬೀಬ್ ಅಡ್ಡೂರು ಹಾಗೂ ಸಲೀಂ ಅಲ್ತಾಫ್, ಕೆಸಿಡಿಎಫ್ ಅಧ್ಯಕ್ಷ ನಾಸಿರ್ ನಂದಾವರ, ಕೆಸಿಎಫ್ ಮುಖಂಡ ಶುಕೂರ್ ಮಾಣಿಲ, ಎಚ್‌ಎಂಸಿ ಯುನೈಟೆಡ್ ಅಧ್ಯಕ್ಷ ಶಕೀಲ್ ಹೊನ್ನಾಲ ಮತ್ತಿತರರು ವೇದಿಕೆಯಲ್ಲಿದ್ದರು.
ಸ್ಪೋರ್ಟ್ಸ್ ಫೆಸ್ಟಿವೆಲ್‌ನಲ್ಲಿ ಯುಎಇಯೆಲ್ಲೆಡೆ ಇರುವ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 900 ಮಂದಿ ಭಾಗವಹಿಸಿದ್ದರು.

ಇದೇ ಸಂದರ್ಭ ತುಂಬೆ ಮೊಯ್ದಿನ್ ಅವರಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಉತ್ತಮ ನಾಯಕ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಧಾನ ಭಾಷಣ ಮಾಡಿದ ಬಿಸಿಎಫ್ ಉಪಾಧ್ಯಕ್ಷ ಎಂ.ಇ.ಮೂಳೂರು, ಸಂಘಟನೆಯ ಸಾಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಬಿಸಿಎಫ್ ಈವರೆಗೆ ಪಿಯುಸಿಯಿಂದ ಸ್ನಾತಕೋತ್ತರ ಪದವಿವರೆಗಿನ ಸುಮಾರು 12 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿದೆ ಎಂದರು.

ಪುರುಷರ ವಿಭಾಗದ ಕ್ರೀಡೆಗಳ ಉಸ್ತುವಾರಿಯನ್ನು ಅಫೀಕ್ ನೇತೃತ್ವದ ಸಮಿತಿ ಮತ್ತು ಮಹಿಳೆಯರ ವಿಭಾಗದ ವಿವಿಧ ಸ್ಪರ್ಧೆಗಳನ್ನು ಬಿಸಿಎಫ್ ಮಹಿಳಾ ವಿಭಾಗದ ಅಧ್ಯಕ್ಷೆ ಮುಮ್ತಾಝ್ ನೇತೃತ್ವದ ಸಮಿತಿಯು ಅಚ್ಚುಕಟ್ಟಾಗಿ ನಿರ್ವಹಿಸಿತ್ತು. ಅಫೀಕ್ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ರಹ್ಮಾನ್ ಸಜಿಪ, ರಫೀಕ್ ಮುಲ್ಕಿ, ನವಾಝ್ ಕೋಟೆಕಾರ್, ಫರ್ಹಾದ್, ಅಬ್ದುಲ್ ಸಮದ್ ಬಿರಾಲೆ, ಇಕ್ಬಾಲ್ ಮೇಫಾ, ಅಶ್ರಫ್ ಸತ್ತಿಕಲ್, ಅಥಾವುಲ್ಲಾ, ಅಶ್ರಫ್ ಜೋಕಟ್ಟೆ ಕಾರ್ಯನಿರ್ವಹಿಸಿದರೆ, ಮಹಿಳಾ ವಿಭಾಗದಲ್ಲಿ ಶಹನಾಝ್, ಆಸಿಯಾ ಮೂಳೂರು, ಝೈನಬಾ ಉಸ್ಮಾನ್, ಆಯಿಶಾ ಅಮೀರ್, ತಂಝಿಮಾ ರಿಯಾಝ್, ಫರ್ಝಾನಾ ಲತೀಫ್ ಮತ್ತಿತರರನ್ನೊಳಗೊಂಡ ತಂಡವು ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧೆಗಳನ್ನು ನಿರ್ವಹಿಸಿತು.

ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಶಟ್ಲ್ ಬ್ಯಾಡ್ಮಿಂಟನ್, ಕಬಡ್ಡಿ, ಸ್ನೂಕರ್, ಟೇಬಲ್ ಟೆನಿಸ್ ಹಗ್ಗ ಜಗ್ಗಾಟ, ಓಟ, ಮೂರು ಕಾಲಿನ ಓಟ ಇತ್ಯಾದಿ ಹಾಗೂ ಮಹಳೆಯರಿಗಾಗಿ ಅಡುಗೆ ತಯಾರಿ ಸ್ಪರ್ಧೆ, ತಿನ್ನುವ ಸ್ಪರ್ಧೆ, ಮೆಹಂದಿ ಸ್ಪರ್ಧೆ, ಸಂಗೀತ ಕುರ್ಚಿ, ರಿಲೇ ಇತ್ಯಾದಿ ನಡೆದವು. ಇದರಲ್ಲಿ ಹಲವಾರು ಮಂದಿ ಭಾಗವಹಿಸಿದರು.

ಬಿಸಿಎಫ್ ಉಪಾಧ್ಯಕ್ಷ ಅಬ್ದುಲ್ಲತೀಫ್ ಮುಲ್ಕಿ ವಂದಿಸಿದರು. ಇಕ್ಬಾಲ್ ಮೇಫಾ ಕಾರ್ಯಕ್ರಮ ನಿರೂಪಿಸಿದರು.

ಸಮದ್ ಬೀರಲಿ, ನವಾಝ್ ಕೋಟೆಕಾರ್, ರಫೀಕ್ ಮುಲ್ಕಿ, ಅಬ್ದುಲ್ ರಹ್ಮಾನ್ ಸಜಿಪ, ಅಬ್ದುಲ್ ಲತೀಫ್, ಅಶ್ರಫ್ ಸತ್ತಿಕಲ್, ಅಮೀರ್ ಹಳೆಯಂಗಡಿ, ರಿಯಾಝ್ ಸುರತ್ಕಲ್, ಇಬ್ರಾಹೀಂ ದುಬಾಲ್, ಹುಸೈನ್ ಸತ್ತಿಕಲ್, ಅಬ್ದುಲ್ ರಝಾಕ್ ಮುತ್ತಿಕ್ಕಲ್, ರಫೀಕ್ ಪುತ್ತಾಕ ಹಾಗೂ ಬಿಸಿಎಫ್ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಮಾಸ್ಟರ್ ಮುಹಮ್ಮದ್ ಅಫ್ರಾಝ್ ಅಫೀಖ್ ಕಿರಾಅತ್ ಪಠಿಸಿದರು. ಬಿಸಿಎಫ್ ಸ್ಪೋಟ್ಸ್ ಕಮಿಟಿಯಅಧ್ಯಕ್ಷ ಅಫೀಖ್ ಹುಸೈನ್ ಸ್ವಾಗತಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News