ಶಾನ್ ವೈಟ್‌ಗೆ ಮೂರನೇ ಚಿನ್ನ, 100 ಪದಕ ಜಯಿಸಿದ ಅಮೆರಿಕ

Update: 2018-02-14 18:30 GMT

ಪಿಯೊಂಗ್‌ಚಾಂಗ್, ಫೆ.14: ಅಮೆರಿಕದ ಸ್ನೋಬೋರ್ಡ್ ಸೂಪರ್‌ಸ್ಟಾರ್ ಶಾನ್ ವೈಟ್ ಪುರುಷರ ಸಿಂಗಲ್ಸ್ ಹಾಫ್‌ಪೈಪ್ ವಿಭಾಗದಲ್ಲಿ ಚಿನ್ನ ಜಯಿಸಿದ್ದಾರೆ. ಇದು ಅಮೆರಿಕ ತಂಡ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಜಯಿಸಿರುವ 100ನೇ ಪದಕವಾಗಿದೆ.

97.75 ಸ್ಕೋರ್ ಗಳಿಸಿದ ವೈಟ್ ಮೊದಲ ಸ್ಥಾನ ಪಡೆದರೆ, ಜಪಾನ್‌ನ ಅಯುಮು ಹಿರಾನೊ ಹಾಗೂ ಆಸ್ಟ್ರೇಲಿಯದ ಸ್ಕಾಟ್ಟಿ ಜೇಮ್ಸ್ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ.

   ಕೆಂಪು ಕೂದಲಿನ ‘ಹಾರಾಡುವ ಟೊಮ್ಯಾಟೋ’ ಎಂದೇ ಖ್ಯಾತರಾಗಿರುವ ವೈಟ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಘಟನೆಯಲ್ಲಿ ಮುಖಕ್ಕೆ ಗಾಯವಾಗಿ 62 ಹೊಲಿಗೆ ಹಾಕಿಕೊಂಡಿದ್ದರು. ಕಳೆದ ತಿಂಗಳು ಭುಜನೋವಿಗೆ ಒಳಗಾಗಿದ್ದರು. ಎಲ್ಲ ಸಮಸ್ಯೆಯನ್ನು ಹಿಮ್ಮೆಟ್ಟಿದ ಅವರು ಪ್ರತಿಸ್ಪರ್ಧಿ ಜಪಾನ್‌ನ ಹಿರಾನೊರನ್ನು ಎರಡನೇ ಸ್ಥಾನಕ್ಕೆ ತಳ್ಳಿ ಮೊದಲ ಸ್ಥಾನ ಪಡೆದರು.

ವೈಟ್ ಮೂರು ಪ್ರತ್ಯೇಕ ವಿಂಟರ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ ಅಮೆರಿಕದ ಮೊದಲ ಅಥ್ಲೀಟ್ ಆಗಿದ್ದಾರೆ. ಸ್ಪೀಡ್ ಸ್ಕೇಟರ್ ಬೊನ್ನಿ ಬ್ಲೈರ್ 1988, 1992 ಹಾಗೂ 1994ರ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಅಮೆರಿಕ ವಿಂಟರ್ ಗೇಮ್ಸ್‌ನಲ್ಲಿ ಒಟ್ಟು 100 ಪದಕ ಜಯಿಸಿದೆ. ಈ ವರ್ಷದ ಗೇಮ್ಸ್‌ನಲ್ಲಿ ಎಲ್ಲ ನಾಲ್ಕು ಪದಕಗಳನ್ನು ಸ್ನೋಬೋರ್ಡರ್‌ಗಳು ಗೆದ್ದುಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News