ಮರಳು ಬಿರುಗಾಳಿ: 4ನೇ ದಿನವೂ ಸೌದಿ ಶಾಲೆಗಳು ಬಂದ್

Update: 2018-02-15 17:00 GMT

ಜಿದ್ದಾ (ಸೌದಿ ಅರೇಬಿಯ), ಫೆ. 15: ಮರಳು ಬಿರುಗಾಳಿಯ ಹಿನ್ನೆಲೆಯಲ್ಲಿ, ಸೌದಿ ಅರೇಬಿಯದ ಹಲವು ಭಾಗಗಳಲ್ಲಿ ಸತತ ನಾಲ್ಕನೆ ದಿನವಾದ ಗುರುವಾರವೂ ಶಾಲೆಗಳು ಮುಚ್ಚಿದ್ದವು.

ಖೈಬರ್, ಹುನಾಕಿಯಾ ಮತ್ತು ವಾದಿಫರಅ ಮುಂತಾದ ಪ್ರದೇಶಗಳಲ್ಲಿ ಶಾಲೆಗಳು ಮುಚ್ಚಿದ್ದವು ಎಂದು ಮದೀನಾ ಶಿಕ್ಷಣ ಪ್ರಾಧಿಕಾರ ಪ್ರಕಟಿಸಿದೆ.

ಈ ಪ್ರದೇಶಗಳಲ್ಲಿ ಮರಳು ಬಿರುಗಾಳಿ ಬೀಸುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ನೀಡಿದ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಟೈಫ್ ವಿಶ್ವವಿದ್ಯಾಲಯದ ಎಲ್ಲಾ ಘಟಕಗಳೂ ಗುರುವಾರ ಮುಚ್ಚಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News