ನಿರಾಶ್ರಿತರ ಹಸ್ತಾಂತರ: ಬಾಂಗ್ಲಾಕ್ಕೆ ಮೊದಲ ಪಟ್ಟಿ ಸಲ್ಲಿಸಿದ ಮ್ಯಾನ್ಮಾರ್

Update: 2018-02-15 17:04 GMT

 ವಿಶ್ವಸಂಸ್ಥೆ, ಫೆ. 15: ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗಳ ನಡುವೆ ಇತ್ತೀಚೆಗೆ ಏರ್ಪಟ್ಟ ನಿರಾಶ್ರಿತರ ಹಸ್ತಾಂತರ ಒಪ್ಪಂದದ ಪ್ರಕಾರ, ಬಾಂಗ್ಲಾದೇಶದ ಶಿಬಿರಗಳಿಂದ ಸ್ವೀಕರಿಸುವ ನಿರಾಶ್ರಿತರ ಮೊದಲ ಪಟ್ಟಿಯನ್ನು ಮ್ಯಾನ್ಮಾರ್ ಬಾಂಗ್ಲಾದೇಶಕ್ಕೆ ನೀಡಿದೆ.

ಪಟ್ಟಿಯಲ್ಲಿ 508 ಹಿಂದೂಗಳು ಮತ್ತು 750 ಮುಸ್ಲಿಮರಿದ್ದಾರೆ.

ಈ ವಿಷಯವನ್ನು ವಿಶ್ವಸಂಸ್ಥೆಗೆ ಮ್ಯಾನ್ಮಾರ್‌ನ ಖಾಯಂ ಪ್ರತಿನಿಧಿ ಹಾವ್ ಡು ಸುವನ್ ಮಂಗಳವಾರ ನಡೆದ ರೊಹಿಂಗ್ಯಾ ನಿರಾಶ್ರಿತರ ಕುರಿತ ಮುಕ್ತ ವಿಚಾರಣೆಯ ವೇಳೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಿಗೆ ತಿಳಿಸಿದರು.

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಆಗಸ್ಟ್ 25ರಂದು ಆರಂಭಗೊಂಡ ಹಿಂಸೆಯ ಬಳಿಕ ಸುಮಾರು 7 ಲಕ್ಷ ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

‘‘ನಿರಾಶ್ರಿತರ ಸ್ವೀಕಾರ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಪ್ರಯತ್ನವಾಗಿ, ಮ್ಯಾನ್ಮಾರ್ ಬಾಂಗ್ಲಾದೇಶಕ್ಕೆ 508 ಹಿಂದೂಗಳು ಮತ್ತು 750 ಮುಸ್ಲಿಮರ ಪಟ್ಟಿಯನ್ನು ಸಲ್ಲಿಸಿದೆ. ಅವರನ್ನು ಮ್ಯಾನ್ಮಾರ್‌ನ ನಿವಾಸಿಗಳೆಂದು ದೃಢೀಕರಿಸಲಾಗಿದೆ’’ ಎಂದು ಸುವನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News