ಮುಜೀಬ್ ಐತಿಹಾಸಿಕ ಸಾಧನೆ

Update: 2018-02-16 19:08 GMT

ಶಾರ್ಜಾ, ಫೆ.16: ಅಫ್ಘಾನಿಸ್ತಾನದ ಯುವ ಸ್ಪಿನ್ ಬೌಲರ್ ಮುಜೀಬ್ ಝದ್ರಾನ್ ಏಕದಿನ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

16ರ ಹರೆಯದ ಝದ್ರಾನ್ ಝಿಂಬಾಬ್ವೆ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ 50 ರನ್‌ಗೆ 5 ವಿಕೆಟ್ ಉಡಾಯಿಸಿದರು. ಈ ಮೂಲಕ ಪಾಕ್ ದಂತಕತೆ ವಕಾರ್ ಯೂನಿಸ್ ದಾಖಲೆ ಮುರಿದರು. ವಕಾರ್ ತನ್ನ 18ನೇ ವರ್ಷದಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದರು.

ಝದ್ರಾನ್ ನೆರವಿನಿಂದ ಅಫ್ಘಾನಿಸ್ತಾನ ತಂಡ ಝಿಂಬಾಬ್ವೆ ತಂಡವನ್ನು ಕೇವಲ 134 ರನ್‌ಗೆ ಆಲೌಟ್ ಮಾಡಿತು. ಝದ್ರಾನ್ 2017ರಲ್ಲಿ ಐರ್ಲೆಂಡ್ ವಿರುದ್ದ ಆಡಿರುವ ತನ್ನ ಚೊಚ್ಚಲ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ್ದರು.

 ಕಳೆದ ತಿಂಗಳು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಂಜಾಬ್ ತಂಡಕ್ಕೆ 4 ಕೋ.ರೂ.ಗೆ ಬಿಕರಿಯಾಗಿದ್ದಾರೆ. ನ್ಯೂಝಿಲೆಂಡ್‌ನಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಆಡಿರುವ ಝದ್ರಾನ್ 21ನೇ ಶತಮಾನದಲ್ಲಿ ಹುಟ್ಟಿ ಏಕದಿನ ಪಂದ್ಯ ಆಡುತ್ತಿರುವ ವಿಶ್ವದ ಮೊದಲ ಆಟಗಾರನಾಗಿದ್ದಾರೆ. ಝದ್ರಾನ್ 2001ರ ಮಾರ್ಚ್ 28 ರಂದು ಜನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News