ಆನ್‌ಲೈನ್ ಬುಕ್ಕಿಂಗ್: ಕೆಎಸ್ಸಾರ್ಟಿಸಿ ಜತೆ ಕೈ ಜೋಡಿಸಿದ ಕೆಎಸ್‌ಟಿಡಿಸಿ

Update: 2018-02-17 13:31 GMT

ಬೆಂಗಳೂರು, ಫೆ.17: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಭಾರತದ ಅತ್ಯಂತ ದೊಡ್ಡ ಸಾರಿಗೆ ಸಂಸ್ಥೆ ಕೆಎಸ್ಸಾರ್ಟಿಸಿಯೊಂದಿಗೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಗಾಗಿ ಇತ್ತೀಚೆಗಷ್ಟೇ ಕೈ ಜೋಡಿಸಿದೆ. ಈ ಮೂಲಕ ಪ್ರವಾಸೋದ್ಯಮದ ಪ್ರಚಾರ, ಪ್ಯಾಕೇಜ್ ಟೂರ್‌ಗಳ ಮಾಹಿತಿಯನ್ನು ರಾಜ್ಯ ಮತ್ತು ಹೊರ ರಾಜ್ಯಗಳಿಗೂ ತಲುಪಿಸಲು ಮುಂದಾಗಿದೆ. ಕೆಎಸ್‌ಟಿಡಿಸಿ ಮತ್ತು ಕೆಎಸ್ಸಾರ್ಟಿಸಿ ನಡುವೆ ಪ್ರಥಮ ಬಾರಿಗೆ ಈ ರೀತಿಯ ಒಪ್ಪಂದ ಏರ್ಪಟ್ಟಿದೆ.

ಇನ್ನುಮುಂದೆ ಕೆಎಸ್‌ಟಿಡಿಸಿಯ ಟೂರ್ ಪ್ಯಾಕೇಜ್‌ಗಳು ಕೆಎಸ್ಸಾರ್ಟಿಸಿಯ ವೆಬ್‌ಸೈಟ್ ಆದ ಅಂದರೆ, ಅವತಾರ್ ಪೋರ್ಟಲ್ ಮೂಲಕವೂ ಬುಕ್ಕಿಂಗ್ ಮಾಡಬಹುದಾಗಿದೆ. ಜತೆಗೆ ಕೆಎಸ್ಸಾರ್ಟಿಸಿ ಮತ್ತು ಕೆಎಸ್‌ಟಿಡಿಸಿಯ ಮೊಬೈಲ್ ಆಪ್ ಹಾಗೂ ಕೆಎಸ್‌ಟಿಡಿಸಿಯ ವೆಬ್‌ಸೈಟ್ www.ksrtc.in www.kstdc.com ಮೂಲಕವೂ ಬುಕ್ ಮಾಡುವ ವ್ಯವಸ್ಥೆ ಈಗಾಗಲೆ ಲಭ್ಯವಿದೆ.

ಕೆಎಸ್‌ಟಿಡಿಸಿಯ ಟೂರ್ ಪ್ಯಾಕೇಜ್‌ಗಳನ್ನು ಈ ವೆಬ್‌ಸೈಟ್ ಹಾಗೂ ಬುಕಿಂಗ್ ಕೌಂಟರ್‌ಗಳಲ್ಲಿ ಬುಕ್ ಮಾಡಬಹುದಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News