ಬೆಂಗಳೂರು: ಕೆಎಸ್ಸಾರ್ಟಿಸಿಗೆ ಉತ್ತಮ ಉಪಕ್ರಮಗಳ ಪ್ರಶಸ್ತಿ

Update: 2018-02-17 14:37 GMT

ಬೆಂಗಳೂರು, ಫೆ.17: ಕೆಎಸ್ಸಾರ್ಟಿಸಿ ತನ್ನ ಕರ್ತವ್ಯದ ಸ್ಥಳಗಳಲ್ಲಿ ಅನುಷ್ಠಾನಗೊಳಿಸಿರುವ ಆರೋಗ್ಯಕರ ಉಪಕ್ರಮಗಳಿಗಾಗಿ ಕರ್ನಾಟಕ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆ ನೀಡುವ ರಾಜ್ಯ ಉತ್ತಮ ಉಪಕ್ರಮಗಳ ಪ್ರಶಸ್ತಿ ಪಡೆದಿದೆ.

ನಿಗಮದ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ಬಯಲು ಮುಕ್ತ ಶೌಚ, ಕರ್ತವ್ಯದ ಮೇಲೆ ತೆರಳುವ ಸಿಬ್ಬಂದಿಗೆ ಮದ್ಯಪಾನ ತಪಾಸಣೆ, ಕರ್ತವ್ಯದ ಸ್ಥಳದಲ್ಲಿ ಮದ್ಯಪಾನ ನಿಷೇಧ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕಾಗಿ ಈ ಪ್ರಶಸ್ತಿಯು ಲಭಿಸಿರುತ್ತದೆ.

ಕೆಎಸ್ಸಾರ್ಟಿಸಿ ಡಿಸೆಂಬರ್-2017ರವರೆಗೆ ಧೂಮಪಾನ ಮಾಡಿರುವವರಿಂದ ರೂ.2.15 ಕೋಟಿ ರೂ. ಹಾಗೂ ಬಯಲು ಶೌಚ ಮಾಡಿರುವವರಿಂದ 54ಲಕ್ಷ ರೂ. ದಂಡವನ್ನು ವಸೂಲಿ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಕೆಎಸ್ಸಾರ್ಟಿಸಿ ನಿರ್ದೇಶಕ ಎಸ್.ಆರ್.ಉಮಾಶಂಕರ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News