ಆಯವ್ಯಯದಲ್ಲಿ ಸರಕಾರಿ ನೌಕರರಿಗೆ ಅನ್ಯಾಯ: ಮಹದೇವಯ್ಯ ಮಠಪತಿ

Update: 2018-02-17 14:34 GMT

ಬೆಂಗಳೂರು, ಫೆ.17: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2018-19ನೆ ಸಾಲಿನ ಆಯವ್ಯಯದಲ್ಲಿ ಸರಕಾರಿ ನೌಕರರಿಗೆ ಕೇವಲ ಶೇ.20ರಷ್ಟು ಮಾತ್ರ ಮೀಸಲಿರಿಸಲಾಗಿದೆ. ಇದು ವೈಜ್ಞಾನಿಕ ಕ್ರಮವಲ್ಲವೆಂದು ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ ಆರೋಪಿಸಿದರು.

ನಮ್ಮ ನೆರೆಹೊರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲಿ ಶೇ.32ರಿಂದ 35ರವರೆಗೆ ಇದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಸರಕಾರಿ ನೌಕರರಿಗೆ ವೈಜ್ಞಾನಿಕವಾದ ವೇತನ ಸಿಗುತ್ತಿಲ್ಲ. ನಮ್ಮ ಬೇಡಿಕೆ ಈಡೇರಿಸಲು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದರು.

ರಾಜ್ಯ ಸರಕಾರಿ ನೌಕರರ ಹಲವು ದಿನಗಳ ಬೇಡಿಕೆಯಾದ ಕೇಂದ್ರ ಸರಕಾರಿ ನೌಕರರಿಗೆ ನೀಡುತ್ತಿರುವ 2ವರ್ಷಗಳ ಶಿಶುಪಾಲನಾ ರಜೆ, ಡಿಸಿಆರ್‌ಜಿ ಜೊತೆ ತುಟ್ಟಿಭತ್ತೆ ವಿಲೀನಗೊಳಿಸುವುದು, ನಿವೃತ್ತಿಯಾದವರಿಗೆ ಪೂರ್ಣ ಪಿಂಚಣಿನೀಡಲು 20ವರ್ಷಗಳಿಗೆ ಅರ್ಹತಾ ಸೇವೆಯನ್ನು ಇಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ರಾಜ್ಯ ಸರಕಾರ ವೌನ ವಹಿಸಿದೆ. ಹೀಗಾಗಿ ತನ್ನ ಮುಂದಿನ ಸಚಿವ ಸಂಪುಟದಲ್ಲಾದರು ನಮ್ಮ ಬೇಡಿಕೆಗಳ ಕುರಿತು ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಪತ್ರಿಕಾ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News