ಬ್ರಿಟಿಷರ ವಿರುದ್ಧ ನೌಕಾಸೇನಾ ಬಂಡಾಯ

Update: 2018-02-17 18:35 GMT

* 1946: ಭಾರತವನ್ನು ಬ್ರಿಟಿಷ್ ದುರಾಡಳಿತದಿಂದ ಮುಕ್ತಗೊಳಿಸಲು ನಡೆದ ಪ್ರಮುಖ ಸ್ವಾತಂತ್ರ ಆಂದೋಲನಗಳಲ್ಲಿ 1946, ಫೆ.18ರ ನೌಕಾಸೇನಾ ಬಂಡಾಯವೂ ಒಂದು. ಬ್ರಿಟಿಷ್ ಸೈನ್ಯದಲ್ಲಿ ನಡೆಯುತ್ತಿದ್ದ ಜನಾಂಗೀಯ ತಾರತಮ್ಯ, ಆಹಾರ ಪೂರೈಕೆಯಲ್ಲಿ ವ್ಯತ್ಯಯವನ್ನು ಖಂಡಿಸಿ ಭಾರತೀಯ ಸೈನಿಕರು ಮುಂಬೈನಲ್ಲಿ ಈ ದಿನ ದಂಗೆಯೆದ್ದರು. ಕೂಡಲೇ ಈ ಬಂಡಾಯ ದೇಶದ ಎಲ್ಲ ಕಡೆ ಹಬ್ಬಿ, ಸುಮಾರು 20,000 ನಾವಿಕರು ಭಾಗವಹಿಸಿದರು. ದಂಗೆಯನ್ನು ಬ್ರಿಟಿಷ್ ಸರಕಾರ ಹತ್ತಿಕ್ಕಿತ್ತಾದರೂ ಅವರ ಏಕಚಕ್ರಾಧಿಪತ್ಯಕ್ಕೆ ನಡುಕ ಹುಟ್ಟಿಸುವಲ್ಲಿ ಈ ಮಹಾ ಬಂಡಾಯ ಯಶಸ್ವಿಯಾಯಿತು. ಬ್ರಿಟಿಷ್ ದೌರ್ಜನ್ಯಕ್ಕೆ 8 ಜನ ಸಾವನ್ನಪ್ಪಿ, 33 ಜನ ಗಾಯಗೊಂಡರು. ಕಮ್ಯುನಿಸ್ಟ್ ಪಕ್ಷ ಮಾತ್ರ ಈ ಬಂಡಾಯಕ್ಕೆ ಬೆಂಬಲ ಸೂಚಿಸಿತ್ತು.

* 1828: ಗಿಬ್ರಾಲ್ಟರ್ ಜಲಸಂಧಿಯಲ್ಲಿ ಮಹಾ ಬಿರುಗಾಳಿಗೆ ಸಿಲುಕಿ 100 ಹಡಗುಗಳು ನಾಶವಾದವು.

* 1879: ಅಮೆರಿಕದ ಸ್ವಾತಂತ್ರ ಪ್ರತಿಮೆ (ಸ್ಟಾಚ್ಯು ಆಫ್ ಲಿಬರ್ಟಿ) ವಿನ್ಯಾಸಗೊಳಿಸಿದ ಶಿಲ್ಪಿ ಫ್ರೆಡರಿಕ್ ಅಗಸ್ಟ್ ಬಾರ್ಥೋಲ್ಡಿಗೆ ಹಕ್ಕುಸ್ವಾಮ್ಯ ನೀಡಲಾಯಿತು.

* 1885: ಅಮೆರಿಕದ ಖ್ಯಾತ ಲೇಖಕ ಮಾರ್ಕ್ ಟ್ವೇನ್‌ನ ಪ್ರಸಿದ್ಧ ಕಾದಂಬರಿ ಅಡ್ವೆಂಚರ್ಸ್ ಆಫ್ ಹಕಲ್‌ಬರಿ ಫಿನ್ ಪ್ರಕಟವಾಯಿತು.

* 1911: ವಿಶ್ವದ ಪ್ರಥಮ ಏರ್ ಮೇಲ್( ವಾಯು ಅಂಚೆ) ಸೌಲಭ್ಯ ಭಾರತದ ಅಲಹಾಬಾದ್‌ನಲ್ಲಿ ಆರಂಭಗೊಂಡಿತು. ಹೆನ್ರಿ ಪಿಕ್ವೆಟ್ ಹೆಸರಿನ 23 ವರ್ಷದ ಪೈಲಟ್ ಸುಮಾರು 6,500 ಪತ್ರಗಳನ್ನು ವಿಮಾನದಲ್ಲಿ ಅಲಹಾಬಾದ್‌ನಿಂದ ನೈನಿ ಪಟ್ಟಣಕ್ಕೆ ಸಾಗಿಸಿದನು.

* 1951: ನೇಪಾಳವು ಸಾಂವಿಧಾನಿಕ ರಾಜಪ್ರಭುತ್ವ ದೇಶವಾಯಿತು.

* 1996: ವಿಶ್ವಕಪ್ ಕ್ರಿಕೆಟ್‌ನ ಪ್ರಥಮ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಕಿನ್ಯಾ ಇಂದು ಭಾರತದ ವಿರುದ್ಧ ಆಡಿತು. ಈ ಪಂದ್ಯದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಶತಕ(127 ರನ್) ದಾಖಲಿಸಿದರು.

* 2013: ಬೆಲ್ಜಿಯಂನ ಬ್ರಸ್ಸೆಲ್ಸ್ ಏರ್‌ಪೋರ್ಟ್‌ನಲ್ಲಿ 50 ಮಿಲಿಯನ್ ಡಾಲರ್ ವೌಲ್ಯದ ವಜ್ರದ ಹರಳುಗಳ ಕಳ್ಳತನ ನಡೆಯಿತು. * 1836: ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಗುರು, ತತ್ವಜ್ಞಾನಿ ರಾಮಕೃಷ್ಣ ಪರಮಹಂಸ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ