ಲುಕ್‍ಔಟ್ ನೋಟಿಸ್ ಇದ್ದರೂ ಮಕಾವು, ಕೌಲಾಲಂಪುರದಲ್ಲಿ ಮಳಿಗೆ ತೆರೆದ ನೀರವ್ ಮೋದಿ!

Update: 2018-02-19 07:16 GMT

ಹೊಸದಿಲ್ಲಿ, ಫೆ.18: ಪಂಬಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿ ವಿರುದ್ಧ ಲುಕ್‍ಔಟ್ ನೋಟಿಸ್ ಜಾರಿಯಾದ ಬಳಿಕವೂ ಆತ, ಮಕಾವು ಹಾಗೂ ಕೌಲಾಲಂಪುರದಲ್ಲಿ ಆಭರಣ ಮಳಿಗೆಗಳನ್ನು ತೆರೆದಿರುವುದು ಬೆಳಕಿಗೆ ಬಂದಿದೆ ಎಂದು indiatoday.in ವರದಿ ಮಾಡಿದೆ.

ಹಲವು ಮಂದಿ ಹಾಲಿವುಡ್ ಮತ್ತು ಬಾಲಿವುಡ್ ತಾರೆಯರ ಜ್ಯುವೆಲ್ಲರ್ ಎನಿಸಿಕೊಂಡಿದ್ದ ನೀರವ್ ಇದೀಗ ಬೃಹತ್ ಬ್ಯಾಂಕ್ ಹಗರಣವೊಂದರಲ್ಲಿ ಆರೋಪಿಯಾಗಿದ್ದಾನೆ. 

ರಾಷ್ಟ್ರೀಕೃತ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಮುಂಬೈ ಶಾಖೆಯೊಂದರಲ್ಲಿ ನಡೆದ 11,400 ಕೋ.ರೂ. ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ)ಡೈಮಂಡ್ ಉದ್ಯಮಿ ನೀರವ್ ಮೋದಿಗೆ ಸೇರಿರುವ ಮೂರು ನಗರಗಳಲ್ಲಿರುವ ಶೋರೂಮ್‌ಗಳು ಹಾಗೂ ಕಚೇರಿಗಳಿಗೆ ಈಗಾಗಲೇ ದಾಳಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News