ಕನ್ನ ಡ ಭಾಷೆ ಗೌರವಿಸಿ

Update: 2018-02-18 18:39 GMT

ಮಾನ್ಯರೇ,

ಶುದ್ಧ ಹಿಂದಿ ಭಾಷೆ ಮಾತನಾಡುವವರು ಬಹಳ ಕಡಿಮೆ, ಹಿಂದಿ ಅಂತ ಮಾತನಾಡುವವರೆಲ್ಲಾ ಮಾತನಾಡುವುದು ಭೋಜ್‌ಪುರಿ, ರಾಜಸ್ಥಾನಿ, ಅವಧಿ, ಬುಂಡೇಲಿ ಇತರ ಭಾಷೆಗಳು ಸಂಸ್ಕೃತ ಭಾಷೆ ಅಂತೂ ಬಳಕೆಯಲ್ಲಿಯೇ ಇರದ ಭಾಷೆ. ಅದನ್ನು ಬಳಸುವುದು ಹೋಮ ಹವನಗಳ ಸಂದರ್ಭದಲ್ಲಿ ಕೆಲ ಮಂತ್ರಗಳನ್ನು ಉದುರಿಸಲು ಅಷ್ಟೇ. ಈ ರೀತಿಯ ಹೇಳಿಕೆಗಳನ್ನು ಯಾವತ್ತೂ ಸಂಘ ಪರಿವಾರದ ರಾಜಕಾರಣಿಗಳು ಕೊಡುವುದನ್ನು ನಾನು ನೋಡೇ ಇಲ್ಲ. ಅವರು ಏನಿದ್ದರೂ ಹಿಂದಿ, ಸಂಸ್ಕೃತ ಬಿಟ್ಟು ಬೇರೆಲ್ಲಾ ಭಾಷೆಗಳನ್ನು ಕುಗ್ಗಿಸುವ ಹೇಳಿಕೆಗಳನ್ನೇ ಕೊಡುತ್ತಾರೆ. ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವ ಅನಂತ ಕುಮಾರ್ ಹೆಗಡೆ ಸಂಸತ್ತಿನಲ್ಲಿ ಹಿಂದಿ ಮಾತನಾಡುವಾಗ, ಹಿಂದಿ ರಾಷ್ಟ್ರಭಾಷೆ ಎಂದು ಹೇಳುವಾಗ, ಹಿಂದಿ ಮೇಲೆ ಅವರಿಗಿರುವ ಗೌರವ ಎದ್ದು ಕಾಣುತ್ತದೆ. ಅದೇ ಕನ್ನಡದ ಬಗ್ಗೆ ಅವರು ಮಾತನಾಡುವಾಗ ಕನ್ನಡದ ಮೇಲಿನ ಅವರ ಉಡಾಫೆಯೂ ಅಷ್ಟೇ ಚೆನ್ನಾಗಿ ಎದ್ದು ಕಾಣುತ್ತದೆ!

ಇಡೀ ದೇಶದ ಮೇಲೆ ಒಂದೇ ಧರ್ಮ, ಒಂದೇ ಸಂಸ್ಕೃತಿ - ಆರ್ಯ ವೈದಿಕ ಧರ್ಮ, ವೈದಿಕ ಸಂಸ್ಕೃತಿಯನ್ನು ಹೇರುವ ಉದ್ದೇಶ ಹೊಂದಿರುವ ಸಂಘ ಪರಿವಾರಕ್ಕೆ ಹಿಂದಿ, ಸಂಸ್ಕೃತವೇ ಮೇಲು, ಉಳಿದೆಲ್ಲಾ ನುಡಿಗಳೂ ಕೀಳು. ಒಂದೇ ಧರ್ಮ, ಒಂದೇ ಸಂಸ್ಕೃತಿಯನ್ನ್ನು ಭಾರತೀಯರೆಲ್ಲರ ಮೇಲೆ ಹೇರಲು ಸಂಘಕ್ಕೆ ಇರುವ ಬಹು ದೊಡ್ಡ ತೊಡಕು ಎಂದರೆ ಇಲ್ಲಿರುವ ವೈವಿಧ್ಯತೆ. ಇಲ್ಲಿಯ ಜನರು ಮಾತನಾಡುವ ಹಲವು ನುಡಿಗಳು, ಇಲ್ಲಿಯವರ ಹಲವು ಸಂಪ್ರದಾಯಗಳು, ಸಂಸ್ಕೃತಿ, ಆಹಾರ ಪದ್ಧತಿ, ಹಲವು ವಿಚಾರಗಳು.. ಇವುಗಳೆಲ್ಲವೂ ಕುಗ್ಗಿದರಷ್ಟೇ ಸಂಘದ ಒಂದೇ ಧರ್ಮ, ಒಂದೇ ಸಂಸ್ಕೃತಿ ಸಿದ್ಧಾಂತದ ಪ್ರಭುತ್ವ ಸಾಧ್ಯ.

Writer - ಭರತ್ ಎಸ್.ಬಿ. ಬೆಂಗಳೂರು

contributor

Editor - ಭರತ್ ಎಸ್.ಬಿ. ಬೆಂಗಳೂರು

contributor

Similar News