ಕತರ್ ಓಪನ್: ಕ್ವಿಟೋವಾ ಪ್ರಶಸ್ತಿ ಸುತ್ತಿಗೆ ಲಗ್ಗೆ

Update: 2018-02-18 18:39 GMT

ದೋಹಾ,ಫೆ.18: ಝೆಕ್ ಗಣರಾಜ್ಯದ ಸ್ಟಾರ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ವಿಶ್ವದ ನಂ.1 ಆಟಗಾರ್ತಿ ಕರೊಲಿನ್ ವೋಝ್ನಿಯಾಕಿ ಅವರನ್ನು ಮಣಿಸುವ ಮೂಲಕ ಕತರ್ ಓಪನ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶನಿವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಕ್ವಿಟೋವಾ ಅವರು ಬೆಲಾರಸ್‌ನ ವೋಝ್ನಿಯಾಕಿ ಅವರನ್ನು 3-6, 7-6(7/3), 7-5 ಸೆಟ್‌ಗಳಿಂದ ಸೋಲಿಸಿದರು. ಮೊದಲ ಸೆಟ್ ಸೋಲಿನಿಂದ ಬೇಗನೆ ಚೇತರಿಸಿಕೊಂಡ ಕ್ವಿಟೋವಾ ಸತತ 12ನೇ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾದರು.

ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಈಗಾಗಲೇ ಪ್ರಶಸ್ತಿ ಜಯಿಸಿರುವ ಕ್ವಿಟೋವಾ ಈ ತಿಂಗಳಲ್ಲಿ ಸತತ 2ನೇ ಬಾರಿ ಫೈನಲ್‌ಗೆ ತಲುಪಿದರು. ಪ್ರಸ್ತುತ ವಿಶ್ವದ ನಂ.21ನೇ ಆಟಗಾರ್ತಿಯಾಗಿರುವ ಕ್ವಿಟೋವಾ ಫೈನಲ್‌ನಲ್ಲಿ ಸ್ಪೇನ್‌ನ ಗಾರ್ಬೈನ್ ಮುಗುರುಝರನ್ನು ಎದುರಿಸಲಿದ್ದಾರೆ. ಒಂದು ವೇಳೆ ಕ್ವಿಟೋವಾ ದೋಹಾ ಓಪನ್ ಪ್ರಶಸ್ತಿ ಜಯಿಸಿದರೆ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಅಗ್ರ-10ಕ್ಕೆ ವಾಪಸಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News