ಚುನಾವಣಾ ಹಿನ್ನೆಲೆ: ತಬೂಕ್ ನಲ್ಲಿ ಎನ್.ಆರ್.ಐ. ಯೂತ್ ಕಾಂಗ್ರೆಸ್ ಸಭೆ

Update: 2018-02-19 08:42 GMT

ಸೌದಿ ಅರೇಬಿಯಾ, ಫೆ.19: ಕರ್ನಾಟಕದಲ್ಲಿ ಶೀಘ್ರವೇ ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಎನ್.ಆರ್.ಐ. ಯೂತ್ ಕಾಂಗ್ರೆಸ್ ವತಿಯಿಂದ ಸೌದಿ ಅರೇಬಿಯಾದ ತಬೂಕ್ ನಲ್ಲಿ ಸಭೆ ನಡೆಯಿತು.

ತಾಯಿಫ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ಕನ್ನಂಗಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ಚುನಾವಣಾ ಸಿದ್ಧತೆಯ ಬಗ್ಗೆ, ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ವಿವರಿಸಿದರು. ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಜಾತ್ಯತೀತತೆ ಸದಾ ಜೀವಂತವಾಗಿರಲು ಕಾಂಗ್ರೆಸ್ ಮತ್ತೆ ಅಧಿಕಾರದ ಗದ್ದುಗೆಯೇರುವುದು ಅನಿವಾರ್ಯ. ಈ ನಿಟ್ಟಿನಲ್ಲಿ ನಾವು ವಿದೇಶದಲ್ಲಿದ್ದರೂ ತಾಯ್ನಾಡಿನ ಬಗ್ಗೆ ವಿಶೇಷ ಗಮನ ಹರಿಸಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.  

ಹುಸೈನ್ ಮುಕ್ವೆ ಕರ್ನಾಟಕದ ಕಾಂಗ್ರೆಸ್ ಸರಕಾರದ ಸಾಧನೆ ಬಗ್ಗೆ ವಿವರಿಸಿದರು.

ಎನ್.ಆರ್.ಐ. ಕನ್ನಡಿಗರ ಕಾಂಗ್ರೆಸ್ ಪಕ್ಷದ ಘಟಕ ರಚನೆ
 ಈ  ಸಂಧರ್ಭದಲ್ಲಿ ಕಾಂಗ್ರೆಸ್ ತಬೂಕ್ ಘಟಕವನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಉಮರ್ ವಲಚ್ಚಿಲ್, ಸಹಾಯಕ ಸಂಚಾಲಕರಾಗಿ ಮುಹಮ್ಮದ್  ಪೆರ್ನೆ ಹಾಗೂ ಮಜೀದ್ ಬಿ.ಸಿ.ರೋಡ್  ಆಯ್ಕೆಯಾದರು.
ಸಭೆಯಲ್ಲಿ ಮುಹಮ್ಮದ್ ಮೋನು ದೊಂಪ, ಶೇಕ್ ಅಬ್ದುಲ್ ರಹಿಮಾನ್ ತಬೂಕ್, ಹಮೀದ್ ಮುಸ್ಲಿಯಾರ್ ಕರಾಯ, ಶುಕೂರ್ ನಾಳ, ಅಬ್ದುಲ್ ರಹಿಮಾನ್ ಅಬ್ಬೋನು, ರಮ್ಲಾನ್ ಮದನಿ, ಸಲೀಂ ಕಡಂಬು, ಅಶ್ರಫ್ ಅಡ್ಡೂರು, ನಿಯಾಝ್ ಬಜ್ಪೆ, ಇಮ್ರಾನ್ ಅಡ್ಡೂರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News