ಪಶ್ಚಿಮ ಬಂಗಾಳ ರಾಜ್ಯಸಭಾ ಸದಸ್ಯೆಯಾಗಿ ಜಯಾ ಬಚ್ಚನ್?

Update: 2018-02-19 08:06 GMT

 ಹೊಸದಿಲ್ಲಿ, ಫೆ.19: ನಟಿ ಹಾಗೂ ಸಮಾಜವಾದಿ ಪಕ್ಷದ(ಎಸ್ಪಿ) ನಾಯಕಿ ಜಯಾ ಬಚ್ಚನ್‌ರನ್ನು ಪಶ್ಚಿಮ ಬಂಗಾಳದ ರಾಜ್ಯಸಭಾ ಅಭ್ಯರ್ಥಿಯನ್ನಾಗಿಸಲು ತೃಣಮೂಲ ಕಾಂಗ್ರೆಸ್ ಆಸಕ್ತಿ ವ್ಯಕ್ತಪಡಿಸಿದ್ದು, ಬಚ್ಚನ್ ಹೆಸರನ್ನು ನಾಮನಿರ್ದೇಶನ ಮಾಡುವ ಸಾಧ್ಯತೆಯಿದೆ.

ಮೇಲ್ಮನೆ ಸದಸ್ಯೆಯಾಗಿರುವ ಜಯಾ ಬಚ್ಚನ್‌ರ ಮೂರನೇ ಅವಧಿಯ ಅಧಿಕಾರ ಎ.3 ರಂದು ಕೊನೆಗೊಳ್ಳಲಿದೆ.

‘‘ರಾಜ್ಯಸಭಾ ಸದಸ್ವತ್ವದ ನಾಮನಿರ್ದೇಶನ ಸ್ಪರ್ಧೆಯಲ್ಲಿ ಜಯಾ ಬಚ್ಚನ್ ಮುಂಚೂಣಿಯಲ್ಲಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಂತಿಮ ನಿರ್ಧಾರ ಕೈಗೊಂಡ ಬಳಿಕ ಅಧಿಕೃತ ಘೋಷಣೆ ಹೊರಬೀಳಲಿದೆ’’ ಎಂದು ತೃಣಮೂಲ ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಎಪ್ರಿಲ್‌ನಲ್ಲಿ ರಾಜ್ಯಸಭೆಯ 58 ಸದಸ್ಯರು ನಿವೃತ್ತಿಯಾಗಲಿದ್ದು, ಉತ್ತರಪ್ರದೇಶದ 10 ಸೀಟುಗಳು ತೆರವಾಗಲಿದೆ. ಬಿಜೆಪಿ ಈ ಸ್ಥಾನ ತುಂಬುವ ನಿರೀಕ್ಷೆಯಿದೆ. ಬಿಜೆಪಿ ಕಳೆದ ವರ್ಷದ 403 ಅಸೆಂಬ್ಲಿ ಸೀಟುಗಳಲ್ಲಿ 312ರಲ್ಲಿ ಜಯ ಸಾಧಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News