ಆನ್‌ಲೈನ್ ಬುಕ್ಕಿಂಗ್ ಒಪ್ಪಂದ ಸ್ವಾಗತಾರ್ಹ

Update: 2018-02-19 18:35 GMT

ಮಾನ್ಯರೇ,

ಪ್ರವಾಸೋದ್ಯಮದ ಬೆಳವಣಿಗೆ ಮತ್ತು ಪ್ರವಾಸಿಗಳ ಅನುಕೂಲಕ್ಕಾಗಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದೊಂದಿಗೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಗಾಗಿ ಒಪ್ಪಂದ ಮಾಡಿಕೊಂಡಿರುವುದು ಸ್ವಾಗತಾರ್ಹ. ಈ ಒಪ್ಪಂದದ ಮೂಲಕ ಪ್ರವಾಸೋದ್ಯಮದ ಪ್ರಚಾರ ಹಾಗೂ ಪ್ಯಾಕೇಜ್ ಟೂರ್‌ಗಳ ಮಾಹಿತಿಯನ್ನು ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ತಲುಪಿಸಲು ಅನುಕೂಲವಾಗಲಿದೆ ಹಾಗೂ ಕೆಎಸ್‌ಟಿಡಿಸಿಯ ಟೂರ್ ಪ್ಯಾಕೇಜ್‌ಗಳು ಕೆಎಸ್ಸಾರ್ಟಿಸಿಯ ಜನಪ್ರಿಯ ವೆಬ್‌ಸೈಟ್‌ಗಳ ಮೂಲಕ ಮತ್ತು ಅವತಾರ್ ಪೋರ್ಟಲ್ ಮೂಲಕವು ಬುಕ್ಕಿಂಗ್ ಮಾಡಬಹುದಾಗಿದೆ. ಜೊತೆಗೆ ಕೆಎಸ್‌ಟಿಡಿಸಿ ಮತ್ತು ಕೆಎಸ್ಸಾರ್ಟಿಸಿಯ ಮೊಬೈಲ್ ಆ್ಯಪ್ ಮೂಲಕ ಹಾಗೂ ವೆಬ್‌ಸೈಟ್‌ಗಳ ಮೂಲಕವು ಬುಕ್ ಮಾಡುವಂತಹ ವ್ಯವಸ್ಥೆಯು ಈಗಾಗಲೇ ಜಾರಿಯಲ್ಲಿದೆ.

ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್‌ಗಳನ್ನು ವೆಬ್‌ಸೈಟ್ ಹಾಗೂ ಬುಕ್ಕಿಂಗ್ ಕೌಂಟರ್ ಮೂಲಕ ಬುಕ್ ಮಾಡುವುದರಿಂದ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ. ಅಷ್ಟೇ ಅಲ್ಲದೆ ಕೆಎಸ್‌ಟಿಡಿಸಿಯು ಪುಣ್ಯ ಕ್ಷೇತ್ರಗಳಿಗೆ ತೆರಳುವ ಪುನೀತಯಾತ್ರೆ ಪ್ಯಾಕೇಜ್‌ಗಳ ಜೊತೆಗೆ ಇತರ ಪ್ರವಾಸಿ ತಾಣಗಳು ಸೇರಿದಂತೆ 30ಕ್ಕೂ ಹೆಚ್ಚು ಪ್ರವಾಸ ಪ್ಯಾಕೇಜ್‌ಗಳನ್ನು ನಡೆಸುತ್ತಿದೆ ಹಾಗೂ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಪ್ರವಾಸ ಸೌಲಭ್ಯ ಕಲ್ಪಿಸಿದ್ದು, ಪುನೀತಯಾತ್ರೆ ಪ್ಯಾಕೇಜ್‌ಗಳಿಗೆ ಶೇ.25ರಷ್ಟು ಸಬ್ಸಿಡಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯು ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ.

Writer - ರಾಮು ಎಲ್.ಪಿ., ಲಕ್ಕವಳ್ಳಿ

contributor

Editor - ರಾಮು ಎಲ್.ಪಿ., ಲಕ್ಕವಳ್ಳಿ

contributor

Similar News