ಏಕದಿನ: ಅಫ್ಘಾನಿಸ್ತಾನಕ್ಕೆ ಭರ್ಜರಿ ಜಯ

Update: 2018-02-19 18:37 GMT

ಶಾರ್ಜಾ, ಫೆ.19: ರಶೀದ್ ಖಾನ್ ಆಲ್‌ರೌಂಡ್ ಆಟದ ನೆರವಿನಿಂದ ಅಫ್ಘಾನಿಸ್ತಾನ ತಂಡ ಝಿಂಬಾಬ್ವೆ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ 146 ರನ್ ಗಳಿಂದ ಗೆಲುವು ಸಾಧಿಸಿದೆ. ಗೆಲ್ಲಲು 242 ರನ್ ಗುರಿ ಪಡೆದ ಝಿಂಬಾಬ್ವೆ ತಂಡ ರಶೀದ್(3-13), ಅಶ್ರಫ್(2-15) ಹಾಗೂ ನಬಿ(2-26) ದಾಳಿಗೆ ಸಿಲುಕಿ 32.5 ಓವರ್‌ಗಳಲ್ಲಿ 95 ರನ್‌ಗೆ ಆಲೌಟಾಯಿತು. ಝಿಂಬಾಬ್ವೆ ಪರ ಕ್ರೆಗ್ ಎರ್ವಿನ್(34) ಅಗ್ರ ಸ್ಕೋರರ್ ಎನಿಸಿಕೊಂಡರು. ಬ್ರೆಂಡನ್ ಟೇಲರ್(27)ಎರಡಂಕೆಯ ಸ್ಕೋರ್ ದಾಖಲಿಸಿದರು.

ಇದಕ್ಕೆ ಮೊದಲು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಅಫ್ಘಾನ್ ತಂಡ ರಹಮತ್ ಶಾ(59) ಹಾಗೂ ಜಾವೇದ್ ಅಹ್ಮದಿ(76) 2ನೇ ವಿಕೆಟ್‌ಗೆ ಸೇರಿಸಿದ 129 ರನ್ ಜೊತೆಯಾಟದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತು. ಅಫ್ಘಾನ್ 43ನೇ ಓವರ್‌ನಲ್ಲಿ 177ಕ್ಕೆ 7 ವಿಕೆಟ್ ಕಳೆದುಕೊಂಡಿತು. ಆಗ ರಶೀದ್ ಖಾನ್(43 ರನ್, 29 ಎಸೆತ) ಹಾಗೂ ಶರಫುದ್ದೀನ್ ಅಶ್ರಫ್(21 ರನ್, 30 ಎಸೆತ) 9ನೇ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 250ರ ಗಡಿ ತಲುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News