ಪಾಕ್ ಯುವ ಕ್ರಿಕೆಟಿಗ ಆತ್ಮಹತ್ಯೆ

Update: 2018-02-20 14:18 GMT

 ಇಸ್ಲಾಮಾಬಾದ್, ಫೆ.20: ಪಾಕ್‌ನ ಮಾಜಿ ಕ್ರಿಕೆಟಿಗ ಆಮೀರ್ ಹನೀಫ್‌ರ ಪುತ್ರ ಮುಹಮ್ಮದ್ ಝರ್ಯಾಬ್ ಅಂಡರ್-19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ನಡೆದಿದೆ.

ಮೊದಲ ವರ್ಷ ಪದವಿಯಲ್ಲಿ ಓದುತ್ತಿರುವ ಝರ್ಯಾಬ್‌ರನ್ನು ವಯಸ್ಸಿನ ಕಾರಣ ನೀಡಿ ಆಯ್ಕೆಗಾರರು ಅಂಡರ್-19 ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಇದರಿಂದ ನೋಂದ ಆತ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

‘‘ನನ್ನ ಮಗ ಒತ್ತಡ ಎದುರಿಸುತ್ತಿದ್ದ. ಆತನೊಂದಿಗೆ ಕೋಚ್‌ಗಳು ವರ್ತಿಸುತ್ತಿದ್ದ ರೀತಿಯಿಂದ ಆತ ಈ ಕೃತ್ಯ ಎಸೆಗಿದ್ದಾನೆ. ಇಂತಹ ಅಸಹಕಾರ ವಾತಾವರಣದಲ್ಲಿ ಬೇರೆಯವರ ಮಕ್ಕಳು ಸಾಯುವಂತಾಗಬಾರದು ಎಂದು ಹನೀಫ್ ಒತ್ತಾಯಿಸಿದ್ದಾರೆ. ಹನೀಫ್ ಪಾಕ್ ಪರ 1990ರಲ್ಲಿ ಐದು ಪಂದ್ಯಗಳನ್ನು ಆಡಿದ್ದರು.

 ಝರ್ಯಾಬ್ ಜನವರಿಯಲ್ಲಿ ಲಾಹೋರ್‌ನಲ್ಲಿ ನಡೆದ ಅಂಡರ್-19 ಟೂರ್ನಿಯಲ್ಲಿ ಕರಾಚಿ ತಂಡವನ್ನು ಪ್ರತಿನಿಧಿಸಿದ್ದರು. ಆದರೆ, ಅವರನ್ನು ಗಾಯದ ಸಮಸ್ಯೆಯಿಂದಾಗಿ ಸರಣಿ ನಡುವೆ ಮನೆಗೆ ವಾಪಸು ಕಳುಹಿಸಲಾಗಿತ್ತು. ಈ ಬಗ್ಗೆ ಯುವ ಆಟಗಾರ ಅಸಮಾಧಾನ ವ್ಯಕ್ತಪಡಿಸಿದಾಗ ಮುಂದಿನ ಟೂರ್ನಿಗೆ ಆಯ್ಕೆ ಮಾಡುವ ಭರವಸೆ ನೀಡಲಾಗಿತ್ತು. ಆದರೆ, ವಯಸ್ಸು ಜಾಸ್ತಿಯಾಗಿದೆ ಎಂಬ ನೆಪವೊಡ್ಡಿ ಅಂಡರ್-19 ತಂಡಕ್ಕೆ ಆಯ್ಕೆ ಮಾಡಿರಲಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News