ಜಯ್ ಶಾ ಪ್ರಕರಣ: ‘ದಿ ವಯರ್’ ಪರ ಆದೇಶಕ್ಕೆ ತಡೆ ವಿಧಿಸಿದ ಗುಜರಾತ್ ನ್ಯಾಯಾಲಯ

Update: 2018-02-20 16:53 GMT

ಹೊಸದಿಲ್ಲಿ, ಫೆ.20: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ವಿರುದ್ಧ ಅವಮಾನಕಾರಿ ಸುದ್ದಿಗಳನ್ನು ಹರಡದಂತೆ ಸುದ್ದಿ ಮಾಧ್ಯಮ ‘ದಿ ವಯರ್’ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿದ ಕೆಳಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಯ್ ಶಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಗುಜರಾತ್ ಉಚ್ಚ ನ್ಯಾಯಾಲಯ ಈ ಆದೇಶಕ್ಕೆ ತಡೆ ವಿಧಿಸಿದೆ. ಹಾಗಾಗಿ ಜಯ್ ಶಾ ಅವರಿಗೆ ಸೇರಿದ ಸಂಸ್ಥೆಯ ವಹಿವಾಟಿನ ಕುರಿತು ‘ದಿ ವಯರ್’ ಯಾವುದೇ ಸುದ್ದಿಯನ್ನು ಹಾಕದಂತೆ ಈ ಆದೇಶ ನಿರ್ಬಂಧಿಸಿದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಒಂದೇ ವರ್ಷದಲ್ಲಿ ಜಯ್ ಶಾ ವಹಿವಾಟಿನಲ್ಲಿ 16,000 ಪಟ್ಟು ಹೆಚ್ಚಾಗಿದೆ ಎಂದು ‘ವಯರ್’ ಆರೋಪಿಸಿದೆ. ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ‘ದಿ ವಯರ್’ ತಿಳಿಸಿದೆ. ಇದಕ್ಕೂ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ಅಹ್ಮದಾಬಾದ್ ಜಿಲ್ಲಾ ನ್ಯಾಯಾಲಯವು ಪ್ರಧಾನಿ ಮೋದಿ ಹೆಸರನ್ನು ಪ್ರಸ್ತಾಪಿಸದೆ ಜಯ್ ಶಾ ವ್ಯವಹಾರದ ಬಗ್ಗೆ ಬರೆಯುವಂತೆ ಅಂತರ್ಜಾಲ ಸುದ್ದಿಸಂಸ್ಥೆ ‘ದಿ ವಯರ್‌’ಗೆ ಅನುಮತಿ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಜಯ್ ಶಾ 2017ರ ಡಿಸೆಂಬರ್‌ನಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ‘ದಿ ವಯರ್’ ವಿರುದ್ಧ ಜಯ್ ಶಾ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News