ಸಿರಿಯ ಮಕ್ಕಳ ಹತ್ಯೆ ಖಂಡಿಸಿ ಯುನಿಸೆಫ್‌ ಖಾಲಿ ಹೇಳಿಕೆ ನೀಡಿದ್ದೇಕೆ ಗೊತ್ತೇ?

Update: 2018-02-20 18:17 GMT

ಅಮ್ಮಾನ್, ಫೆ. 20: ವಿಶ್ವಸಂಸ್ಥೆಯ ಮಕ್ಕಳ ನಿಧಿ ಯುನಿಸೆಫ್ ಖಾಲಿ ಹೇಳಿಕೆಯೊಂದನ್ನು ನೀಡುವ ಮೂಲಕ ಸಿರಿಯದಲ್ಲಿ ನಡೆಯುತ್ತಿರುವ ಮಕ್ಕಳ ಹತ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ‘‘ಯಾವ ಪದವೂ ನ್ಯಾಯ ಸಲ್ಲಿಸುವುದಿಲ್ಲ’’ ಎಂಬುದಾಗಿ ಹೇಳಿಕೆಯ ಅಡಿಯಲ್ಲಿ ಬರೆಯಲಾಗಿದೆ.

ಸಿರಿಯದ ಯುದ್ಧ ವಿಮಾನಗಳು ಸೋಮವಾರ ಭೀಕರ ಬಾಂಬ್ ದಾಳಿಗಳನ್ನು ನಡೆಸಿ 127 ನಾಗರಿಕರನ್ನು ಕೊಂದ ಬಳಿಕ ಯುನಿಸೆಫ್ ಈ ಹೇಳಿಕೆ ಹೊರಡಿಸಿದೆ. ಮೃತರ ಪೈಕಿ 39 ಮಂದಿ ಮಕ್ಕಳು.

‘‘ದಾಳಿಯಲ್ಲಿ ಮಡಿದ ಮಕ್ಕಳು, ಅವರ ತಾಯಂದಿರು, ತಂದೆಯಂದಿರು ಮತ್ತು ಅವರ ಪ್ರೀತಿಪಾತ್ರರಿಗೆ ಪದಗಳು ಯಾವ ರೀತಿಯಲ್ಲೂ ನ್ಯಾಯ ನೀಡುವುದಿಲ್ಲ’’ ಎಂದು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಕ್ಕಾಗಿನ ಯನಿಸೆಫ್ ಪ್ರಾದೇಶಿಕ ನಿರ್ದೇಶಕ ಗೀರ್ಟ್ ಕ್ಯಾಪಲೇರ್ ಹೇಳಿಕೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News